ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆ ಎಂದು ನಿಮಗನ್ನಿಸುತ್ತದೆಯೇ?

ಹೀಗಂತ ಪ್ರಶ್ನೆ ಕೇಳಿದ್ದೆವು. ಹಿಂದಿನ ಎಲ್ಲ ಸಮೀಕ್ಷೆಗಳಿಗಿಂತ ಹೆಚ್ಚು ಪ್ರತಿಕ್ರಿಯೆಗಳನ್ನು ಆಕರ್ಷಿಸಿದ ಪ್ರಶ್ನೆ ಇದು. ೩೬೭ ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ೭೬ ಮಂದಿ ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. ೨೬೨ ಮಂದಿಗೆ ಇದು ಸಾಧ್ಯವಿಲ್ಲ ಅನಿಸಿದೆ. ೨೯ ಮಂದಿ ಗೊತ್ತಿಲ್ಲ ಎಂದಿದ್ದಾರೆ.

ಒಟ್ಟು ಶೇ.೨೦ರಷ್ಟು ಮಂದಿ ಜನಶ್ರೀ ಯಶಸ್ವಿಯಾಗುತ್ತೆ ಎಂದಿದ್ದರೆ, ಶೇ.೭೧ರಷ್ಟು ಮಂದಿ ಇಲ್ಲ ಎಂದಿದ್ದಾರೆ. ಶೇ.೭ರಷ್ಟು ಜನರು ಗೊತ್ತಿಲ್ಲ ಎಂದಿದ್ದಾರೆ.

I joined JASHREE news channel today and will be hosting a daily show late evening. Need your support and best wishes. I will also host a morning breakfast programme show which will be unique. . ಹೀಗಂತ ರವಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

My friend Ravi Belagere took charge of Janashree Channel Today. Gud luck Ravee Sir.  ಹೊಸ ದ್ವೀಪಗಳಿಗೆ ಹೊರಟಾನ ಬನ್ನೀ.... ಎಂದು ರವಿಬೆಳಗೆರೆಯ ಮಿತ್ರ, ಕನ್ನಡದ ಮತ್ತೋರ್ವ ಕ್ರಿಯಾಶೀಲ ಪತ್ರಕರ್ತ ಜೋಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ರವಿ ಬೆಳಗೆರೆ ಜನಶ್ರೀಯಲ್ಲಿ ಸಿಇಓ (ಕಂಟೆಂಟ್) ಆಗಿ ಸೇರ್ಪಡೆಯಾಗಿದ್ದಾರೆ ಎಂಬ ಮಾಹಿತಿ ನಮಗಿತ್ತು.
ಆದರೆ ರವಿ ಬೆಳಗೆರೆ ಈ ವಾರದ ತಮ್ಮ ಹಾಯ್ ಬೆಂಗಳೂರಿನಲ್ಲಿ ಹೀಗೆ ಬರೆದಿದ್ದಾರೆ: ಫೆಬ್ರವರಿ ೧೮ಕ್ಕೆ ಜನಶ್ರೀ ವಾಹಿನಿ ಆರಂಭವಾಗಲಿದೆ. ಅದಕ್ಕೆ ನಾನು ಮುಖ್ಯಸ್ಥನಲ್ಲ, ಸಿಬ್ಬಂದಿಯವನೂ ಅಲ್ಲ. ಪ್ರತಿನಿತ್ಯ ಒಂದು ಟಾಕ್ ಶೋ ಥರದ್ದನ್ನು ಮಾಡಿಕೊಡಲು ಒಪ್ಪಿದ್ದೇನೆ.

ಬೆಳಗೆರೆಯವರ ಈ ಸ್ಟೇಟ್‌ಮೆಂಟು ಗಮನಿಸಿದರೆ, ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆಯೇ ಎಂಬ ನಮ್ಮ ಪ್ರಶ್ನೆಯೇ ಅಪ್ರಸ್ತುತವಾಗಿದೆ.

ಅದು ಹಾಗೆ ಇರಲಿ, ವಿಶ್ವೇಶ್ವರ ಭಟ್ಟರು ಪ್ಯಾಡು ಕಟ್ಟಿ ಕನ್ನಪ್ರಭದಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಕನ್ನಡಪ್ರಭ ಯಾಕೋ ಬ್ಲಾಕ್ ಅಂಡ್ ವೈಟ್ ಮೂವಿ ಇದ್ದಂತೆ ಕಾಣುತ್ತಿದೆ, ಏನಾದ್ರೂ ಮ್ಯಾಜಿಕ್ ಮಾಡಿ ಸರ್ ಎಂಬುದು ಅವರ ಅಭಿಮಾನಿ ಓದುಗರ ಬೇಡಿಕೆ.

ವಿಜಯ ಕರ್ನಾಟಕವನ್ನು ನಂ.೧  ಮಾಡಿದವರು ಭಟ್ಟರು. ಭಟ್ಟರು ವಿಜಯ ಕರ್ನಾಟಕ ಕೈಗೆ ತೆಗೆದುಕೊಂಡಾಗ ಅಂದಿನ ಮಾಲೀಕ ವಿಜಯ ಸಂಕೇಶ್ವರರ ಪೂರ್ಣ ಬೆಂಬಲವಿತ್ತು. ಸಂಕೇಶ್ವರರ ಮಾರ್ಕೆಟಿಂಗ್ ಕೌಶಲ್ಯ ಅಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಈಗ ಕನ್ನಡಪ್ರಭಕ್ಕೆ ಇಬ್ಬರು ಮಾಲೀಕರಿದ್ದಾರೆ. ಇಬ್ಬರೂ ಮಾರ್ಕೆಟಿಂಗ್ ಜಗತ್ತಿನಲ್ಲಿ ಹೆಸರು ಮಾಡಿದವರೇ. ಆದರೆ ಭಟ್ಟರಿಗೆ ಪೂರ್ಣ ಪ್ರಮಾಣದ ಬೆಂಬಲ ದೊರೆಯಬಹುದೇ? ಇನ್ನು ಮೂರು ತಿಂಗಳ ಹೊತ್ತಿಗೆ ರಾಜೀವ್ ಚಂದ್ರಶೇಖರ್ ಕನ್ನಡಪ್ರಭದ ಇನ್ನಷ್ಟು ಶೇರುಗಳನ್ನು ಪಡೆದು ಪ್ರಭುತ್ವ ಸಾಧಿಸಲಿದ್ದಾರೆ ಎಂಬ ಮಾತಿದೆ. ವಿಜಯ ಕರ್ನಾಟಕ ಮತ್ತು ಪ್ರಜಾವಾಣಿಯನ್ನು ಮೀರಿ ನಿಲ್ಲಲು ಭಟ್ಟರು ಮತ್ತು ರಾಜೀವ್ ಚಂದ್ರಶೇಖರ್ ಅವರಿಂದ ಸಾಧ್ಯವೇ?

ಭಟ್ಟರ ಸಾರಥ್ಯದಲ್ಲಿ ಕನ್ನಡಪ್ರಭ ನಂ.೧ ಕನ್ನಡ ಪತ್ರಿಕೆಯಾಗಿ ಹೊರಹೊಮ್ಮಬಹುದೇ?

ಇದು ಈ ವಾರದ ನಮ್ಮ ಪ್ರಶ್ನೆ. ಆಗುತ್ತೆ, ಆಗೋದಿಲ್ಲ, ಗೊತ್ತಿಲ್ಲ ಎಂಬ ಉತ್ತರಗಳು ಯಥಾಪ್ರಕಾರ ನಿಮಗೆ. ದಯವಿಟ್ಟು ಓಟ್ ಮಾಡಿ.

0 komentar

Blog Archive