ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿರುವ ಅನುಮತಿ ಸರಿಯೇ?
ಹೀಗಂತ ಪ್ರಶ್ನೆ ಕೇಳಿದ್ದೆವು. ಸರಿ, ತಪ್ಪು, ಗೊತ್ತಿಲ್ಲ ಎಂಬ ಮೂರು ಉತ್ತರಗಳನ್ನು ಆಯ್ಕೆಗೆ ನೀಡಲಾಗಿತ್ತು. ಸಂಪಾದಕೀಯ ನಡೆಸಿದ ಈ ಪುಟ್ಟ ಸಮೀಕ್ಷೆಯಲ್ಲಿ ಮತ ಚಲಾಯಿಸಿದವರು ಒಟ್ಟು ೧೪೬ ಮಂದಿ. ಈ ಪೈಕಿ ೧೦೭ ಮಂದಿ ರಾಜ್ಯಪಾಲರ ನಿರ್ಧಾರ ಸರಿ ಎಂದು ಮತ ಚಲಾಯಿಸಿದ್ದಾರೆ. ೩೩ ಮಂದಿ ಸರಿಯಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ೬ ಮಂದಿ ಗೊತ್ತಿಲ್ಲ ಎಂದು ವೋಟ್ ಮಾಡಿದ್ದಾರೆ.
ರಾಜ್ಯಪಾಲರು ತೆಗೆದುಕೊಂಡ ತೀರ್ಮಾನ ಸರಿ ಎಂದವರು ಶೇ.೭೩.೨೮ ಮಂದಿಯಾದರೆ ತಪ್ಪು ಎಂದವರು ಶೇ. ೨೨.೬೦ರಷ್ಟು ಓದುಗರು. ಇನ್ನು ಗೊತ್ತಿಲ್ಲ ಎಂದವರು ಶೇ.೪.೧೦ರಷ್ಟು ಮಂದಿ.
ಮತ ಚಲಾಯಿಸಿದ ಎಲ್ಲ ೧೪೬ ಓದುಗರಿಗೂ ಕೃತಜ್ಞತೆಗಳು.
ಮುಂದಿನ ಸಮೀಕ್ಷೆಯೂ ಬಿ.ಎಸ್.ಯಡಿಯೂರಪ್ಪ ಅವರನ್ನು ಕುರಿತದ್ದೇ ಆಗಿದೆ. ಈಗಾಗಲೇ ರಾಜ್ಯಪಾಲರ ಅನುಮತಿ ಪಡೆದು ವಕೀಲರುಗಳಾದ ಸಿರಾಜಿನ್ ಬಾಷ ಮತ್ತು ಬಾಲರಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ವಿಶೇಷವೆಂದರೆ ಈ ಎಲ್ಲ ಪ್ರಕರಣಗಳನ್ನು ಬಯಲಿಗೆ ತಂದದ್ದು ಕರ್ನಾಟಕದ ಮೀಡಿಯಾಗಳು.
ಭ್ರಷ್ಟಾಚಾರದ ಆರೋಪಗಳು ಎದುರಾದ ಹಿನ್ನೆಲೆಯಲ್ಲಿ ಹಲವರು ಸಚಿವರ ತಲೆದಂಡವನ್ನು ಮುಖ್ಯಮಂತ್ರಿಗಳೇ ಪಡೆದಿದ್ದರು. ಈಗ ಸ್ವತಃ ಯಡಿಯೂರಪ್ಪನವರ ಸರದಿ.
ಮೊಕದ್ದಮೆಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆಗಾರಿಕೆ ನಿಭಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕೆ? ಇದು ನಮ್ಮ ಪ್ರಶ್ನೆ. ದಯವಿಟ್ಟು ನಿಮ್ಮ ಮತ ದಾಖಲಿಸಿ. ಕಳೆದ ಬಾರಿ ಮತ ಚಲಾಯಿಸದವರು ಈ ಬಾರಿಯಾದರೂ ಚಲಾಯಿಸಿ. ನಿಮ್ಮ ಬೆರಳಿಗೆ ನಾವು ಶಾಯಿ ಹಾಕುವುದಿಲ್ಲ!
发表评论