ಕಾಂಗ್ರೆಸ್ ಪಕ್ಷದಲ್ಲಿ ಮೂಲನಿವಾಸಿಗಳು-ವಲಸಿಗರು ಎಂಬ ಕಾಳಗ ನಿಮಗೆ ಗೊತ್ತೇ ಇದೆ. ಈ ತರಹದ ಜಗಳ ಪತ್ರಿಕಾ ಕಚೇರಿಗಳಲ್ಲೂ ಇದೆ ಎಂದರೆ ನೀವು ನಂಬಬೇಕು. ಸಂಯುಕ್ತ ಕರ್ನಾಟಕದಲ್ಲಿ ಈ ಯುದ್ಧ ಜಾರಿಯಲ್ಲಿದೆ.
ಲೇಟೆಸ್ಟ್ ಸುದ್ದಿ ಏನೆಂದರೆ ಹಿರಿಯ ಪತ್ರಕರ್ತೆ ಸಾವಿತ್ರಿ ಸಂಯುಕ್ತ ಕರ್ನಾಟಕ ತೊರೆದಿದ್ದಾರೆ. ಹಲವು ವರ್ಷಗಳಿಂದ ಅವರು ಸಂಕದಲ್ಲಿದ್ದರು. ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರು ಮಾಡಿದವರು ಸಾವಿತ್ರಿ. ಪತ್ರಿಕೆ ಬಿಟ್ಟು ಹೋಗುವುದಕ್ಕೆ ಒಳಗಿನ ಜಗಳಗಳು, ಮನಸ್ತಾಪಗಳೇ ಕಾರಣವಾದವೇ?
ಇದೆಲ್ಲ ಶುರುವಾಗಿದ್ದು ಸಂಕವನ್ನು ಹೊಸ ವಿನ್ಯಾಸದಲ್ಲಿ ರೀಲಾಂಚ್ ಮಾಡಲು ಅದರ ಸಂಪಾದಕ ರಾಜನ್ ಪ್ರಯತ್ನಿಸಲು ಆರಂಭಿಸಿದಾಗ. ಎಲ್ಲ ಪತ್ರಿಕೆಗಳು, ಅದರಲ್ಲೂ ವಿಶೇಷವಾಗಿ ಹೊಸದಿಗಂತದಂಥ ಪತ್ರಿಕೆಯೇ ಹೊಸ ವಿನ್ಯಾಸದೊಂದಿಗೆ ಮೂಡಿಬರುತ್ತಿರುವಾಗ ಸಂಕಗೂ ಒಂದು ರೂಪವನ್ನು ಕೊಡಲು ರಾಜನ್ ಯತ್ನಿಸಿದರು. ಇದು ಹಳಬರನ್ನು ಕಟ್ಟಿಕೊಂಡು ಹೂಡುವ ಆಟವಲ್ಲ ಎಂಬುದು ಅವರಿಗೂ ಗೊತ್ತಿತ್ತು. ಹೀಗಾಗಿ ಒಂದಷ್ಟು ಹೊಸಬರು ಬಂದರು. ಶುರುವಾಯ್ತು ಕದನ.
ಈ ನಡುವೆ ವಾರಪತ್ರಿಕೆಯೊಂದರಲ್ಲಿ ಸಂಕದ ಕೆಲವು ಅವ್ಯವಹಾರಗಳ ಕುರಿತು ವರದಿಯೂ ಬಂತು. ಮಾಹಿತಿ ಕೊಟ್ಟವರು ಒಳಗಿನವರೇ ಎಂಬ ಅಂಶ ಬಯಲಾಯ್ತು. ನಂತರ ಹಳಬರು ಒಂದು ಸಿಗ್ನೇಚರ್ ಕ್ಯಾಂಪೇನ್ ನಡೆಸಿದರು. ಕಾರ್ಯದರ್ಶಿ (ನಾರಾಯಣಮೂರ್ತಿ) ಹಾಗು ಸಂಪಾದಕರನ್ನು ಬದಲಾಯಿಸಬೇಕು ಎಂಬುದು ಅವರ ಬೇಡಿಕೆ. ಸಾಕಷ್ಟು ಸಹಿಗಳು ಸಂಗ್ರಹಗೊಂಡವು. ಲೋಕಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಆದರೆ ಇದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.
ಇದೆಲ್ಲವೂ ಸಂಕದಲ್ಲಿ ಆಂತರಿಕ ಸಂಘರ್ಷವನ್ನು ಹುಟ್ಟುಹಾಕಿತ್ತು. ಪತ್ರಿಕೆಗೆ ಹೊಸ ರೂಪ ಕೊಡಲು ರಾಜನ್ ಹೆಣಗಾಡಿದರೂ, ಹಲವರ ಅಸಹಕಾರದಿಂದಾಗಿ ಅದು ಹಳೇ ಮುದುಕಿಗೆ ಸೀರೆ ಉಡಿಸಿದಂತಾಯ್ತು, ಅಷ್ಟೆ.
ಇನ್ನು ತಮ್ಮ ವಿರುದ್ಧ ದೂರು ಕೊಟ್ಟವರ ವಿರುದ್ಧ ಕಾರ್ಯದರ್ಶಿಗಳು ರಾಂಗಾಗಿದ್ದರು. ಕೆಲವು ಬದಲಾವಣೆಗಳೂ ಆದವು. ಹಳಬರ ಪೈಕಿ ಜೋಷಿಯವರನ್ನು ಮಂಗಳೂರಿಗೆ ವರ್ಗಾಯಿಸಲಾಯಿತು. ನಂತರ ಅಲ್ಲಿಂದ ದಾವಣಗೆರೆಗೆ ಕಳುಹಿಸಲಾಯಿತು. ವರದಿಗಾರ್ತಿ ಭುವನೇಶ್ವರಿಯನ್ನು ಸಿಂಧೂರ ಸಪ್ಲಿಮೆಂಟ್‌ಗೆ ಹಾಕಲಾಯಿತು. ಆಕೆ ಬೇಸರದಿಂದ ರಾಜೀನಾಮೆ ಕೊಟ್ಟು ಹೋದರು. ಸಿಂಧೂರ, ಸಿನಿಮಾ ಸಪ್ಲಿಮೆಂಟುಗಳಲ್ಲಿದ್ದ ಸಾವಿತ್ರಿಯವರಿಗೆ ಕೃಷಿ ಪುರವಣಿಯ ಜವಾಬ್ದಾರಿ ಹೊರಿಸಲಾಯಿತು. ಈಗ ಸಾವಿತ್ರಿ ಕೂಡ ಪತ್ರಿಕೆ ತೊರೆದಿದ್ದಾರೆ.
ಹಳಬರ ಮತ್ತು ಹೊಸಬರ ನಡುವೆ ಕಂದಕ ಸೃಷ್ಟಿ ಮಾಡಿದ್ದೀರಿ ಎಂದು ಆಗಾಗ ಎಡಿಟೋರಿಯಲ್ ಮೀಟಿಂಗುಗಳಲ್ಲಿ ಆರ್ಭಟಿಸುತ್ತಿದ್ದ ಮತ್ತೊಬ್ಬ ವರದಿಗಾರರನ್ನು ಬೇರೊಂದು ಜಿಲ್ಲೆಗೆ ಸಾಗಹಾಕುವ ಯತ್ನಗಳೂ ನಡೆದಿವೆ.
ಒಟ್ಟಿನಲ್ಲಿ ಸಂಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನಂತೂ ಈ ಬೆಳವಣಿಗೆಗಳು ಹೇಳುತ್ತಿವೆ.
*******
ಉದಯವಾಣಿ ಬೆಂಗಳೂರು ಆವೃತ್ತಿಯ ಸರ್ವ ಸಿಬ್ಬಂದಿ ಇನ್ನು ಮುಂದೆ ರಜೆ ಬೇಕೆಂದರೆ ಸಂಪಾದಕ ತಿಮ್ಮಪ್ಪ ಭಟ್ಟರನ್ನೇ ಕೇಳಿ ಪಡೆಯಬೇಕು. ಹೀಗಂತ ಒಂದು ಆದೇಶವನ್ನು ಎರಡು ದಿನಗಳ ಕೆಳಗೆ ನೋಟಿಸ್ ಬೋರ್ಡ್‌ಗೆ ಅಂಟಿಸಲಾಗಿದೆ. ಅಲ್ಲಿಗೆ ಡಿವಿಜನಲ್ ಮ್ಯಾನೇಜರ್ ಇನ್ನು ಮುಂದೆ ರಜೆ ಕೊಡುವ ಹಾಗಿಲ್ಲ. ಸದ್ಯಕ್ಕೆ ಭಟ್ಟರಿಗೆ ಒಂದು ಕಿರುಕುಳ ತಪ್ಪಿದಂತಾಗಿದೆ. ಸಿಬ್ಬಂದಿ ಇನ್ನು ಮುಂದೆ ಹದ್ದುಬಸ್ತಿನಲ್ಲಿ ಇರುವ ಸಾಧ್ಯತೆಯೂ ಇದೆ.
ಜನವರಿ ೧೧ರಂದು ಸಂಪಾದಕೀಯದಲ್ಲಿ ಬರೆದದ್ದನ್ನು ನೆನಪಿಸಿಕೊಳ್ಳಿ:
ಮೃದು ಸ್ವಭಾವದ ತಿಮ್ಮಪ್ಪ ಭಟ್ಟರಿಗೆ ಉದಯವಾಣಿಯಲ್ಲಿ ಸಂಪಾದಕರಿಗೆ ನೀಡುವ ಪೂರ್ಣ ಅಧಿಕಾರವನ್ನು ಕೊಟ್ಟೇ ಇರಲಿಲ್ಲ. ಎಲ್ಲವೂ ಡಿವಿಜಿಜನಲ್ ಮ್ಯಾನೇಜರ್ ಒಬ್ಬನ ಕೈಯಲ್ಲೇ ಇತ್ತು. ಸಂಪಾದಕೀಯ ವಿಭಾಗ ಹೊರತುಪಡಿಸಿ ಉಳಿದ ವಿಭಾಗಗಳ ಸಿಬ್ಬಂದಿಗೆ ರಜೆ ನೀಡುವ, ನಿರಾಕರಿಸುವ ಅಧಿಕಾರವನ್ನೂ ಭಟ್ಟರಿಗೆ ನೀಡಲಾಗಿರಲಿಲ್ಲ. ಹೀಗಾಗಿ ಯಾವುದೂ ಅವರ ಕಂಟ್ರೋಲ್‌ನಲ್ಲೇ ಇರಲಿಲ್ಲ. ಡಿಟಿಪಿ ಆಪರೇಟರ್‌ಗಳು ತಿಂಗಳುಗಟ್ಟಲೆ ರಜೆ ಹಾಕಿದರೂ ಕೇಳುವವರು ಇರಲಿಲ್ಲ. ಇದರಿಂದ ಭಟ್ಟರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತುಗಳೂ ಇವೆ.
ಕೊನೇ ಕುಟುಕು:
ಉದಯವಾಣಿಯಲ್ಲಿ ಆದ ಈ ಸಣ್ಣ ಬದಲಾವಣೆಗೆ ಸಂಪಾದಕೀಯ ಕಾರಣ ಎಂದು ನಾವು ಹೇಳುವುದಿಲ್ಲ. ಹಾಗೇನಾದರೂ ಹೇಳಿದರೆ ಸ್ತ್ರೀಲಿಂಗದ ಹೆಸರಲ್ಲಿ ಬ್ಲಾಗ್ ನಡೆಸುವ ಅಂತರ್ಲಿಂಗಿಯೊಂದು ವಿಕಾರವಾಗಿ ಚೀರಾಡಿ ನನ್ನ ವಿಮರ್ಶೆಯ ಕಥೆ ಗೋವಿಂದಾ, ಅಕ್ಕೋ, ಅಣ್ಣೋ, ಹಿಡಿರೀ-ತದುಕ್ರೀ ಎಂದು ಊಳಿಡುವ ಸಾಧ್ಯತೆ ಇದೆ. ಆ ಪ್ರಾಣಿಗೆ ಕಷ್ಟ ಕೊಡುವುದು ನಮಗೆ ಇಷ್ಟವಿಲ್ಲ.
发表评论