ಭಟ್ಟರ ಸೈಟಿನಲ್ಲಿದ್ದ ಸಿಹಿಸುದ್ದಿಯ ಸಮಾಚಾರವನ್ನು ಸಂಪಾದಕೀಯ ಪ್ರಕಟಿಸುತ್ತಿದ್ದಂತೆ ನೂರಾರು ಮಂದಿ ಬಂದುಹೋಗಿದ್ದಾರೆ. ಸಂಜೆ ಹೊತ್ತಿಗೆ ಎಲ್ಲರಿಗೂ ಉತ್ತರಿಸಿ ಸಾಕಾಗಿ ಹೋದ ಭಟ್ಟರು ವೆಬ್‌ಸೈಟ್ ತಾತ್ಕಾಲಿಕ ನಿಲುಗಡೆಗೆ ನಿರ್ಧರಿಸಿದ್ದಾರೆ ಎಂಬುದು ರಾಜರಾಜೇಶ್ವರಿ ನಗರದ ಕಡೆಯಿಂದ ಗೊತ್ತಾಗಿರುವ ಸುದ್ದಿ.
ಆದರೆ ಭಟ್ಟರ ಪ್ರಕಾರ ಅವರ ಹೊಸ ವೆಬ್‌ಸೈಟು ಇನ್ನೂ ಲಾಂಚ್ ಆಗೇ ಇಲ್ಲ. ಸದ್ಯದಲ್ಲೇ ಅದನ್ನು ಲಾಂಚ್ ಮಾಡುತ್ತೇನೆ ಎಂದು ಅವರು ತಮ್ಮ ಫೇಸ್‌ಬುಕ್ ಅಭಿಮಾನಿಗಳಿಗೆ ಅಭಯವಿತ್ತಿದ್ದಾರೆ.
ಭಟ್ಟರು ಫೇಸ್‌ಬುಕ್‌ನಲ್ಲಿ ಬರೆದಿರುವುದು ಹೀಗೆ:
Vishweshwar Bhat Dear Friends,
Please bear with me for couple of days. I am busy with my future project. I had to leave for Delhi on an urgent work. Hence the delay in launching my website. I am sure, you will understand me and wait for my website. I will not disappoint you.
My best
...
ಭಟ್ಟರಿಗೆ ವೈಯಕ್ತಿಕ ಬ್ಲಾಗ್, ವೆಬ್‌ಸೈಟ್ ಎಂದರೆ ಅಷ್ಟಕ್ಕಷ್ಟೆ ಅನ್ನುವ ಮಾತಿದೆ. ಹಿಂದೆ ಭಟ್ಟರು ಬ್ಲಾಗ್‌ಗಳ ಕುರಿತು ಹೊಂದಿರುವ ಅಭಿಪ್ರಾಯದ ಕುರಿತು ರವಿ ಬೆಳಗೆರೆ ಬರೆದಿದ್ದರು. ಅದರ ಪ್ರಕಾರ ಬ್ಲಾಗರ್‌ಗಳೆಂದರೆ ಒಂಟಿಕೋಣೆಯಲ್ಲಿ ಬಾಗಿಲು ಮುಚ್ಚಿಕೊಂಡು ಕುಳಿತು ದುರ್ವಾಸನೆ ಬಿಟ್ಟು ಅದನ್ನೇ ಆಸ್ವಾದಿಸುವವರು. ಹಾಗೆ ನೋಡಿದರೆ ಬ್ಲಾಗ್‌ಗೂ, ವೈಯಕ್ತಿಕ ವೆಬ್‌ಸೈಟಿಗೂ ಅಂಥ ವ್ಯತ್ಯಾಸಗಳೇನು ಇಲ್ಲ.
ಭಟ್ಟರು ನಿಜಕ್ಕೂ ಹಾಗೆ ಹೇಳಿದ್ದರಾ? ಹೇಳಿದ್ದರೆ ಮತ್ತೇಕೆ ಅವರು ಕೋಣೆ ಸೇರಿಕೊಂಡು ದುರ್ವಾವಸೆ ಬಿಟ್ಟು ಆಸ್ವಾದಿಸಲು ಹೊರಟಿದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಭಟ್ಟರು ಹಾಗೆ ಹೇಳಿರದೇ ಇರಲಿ ಎಂಬುದು ಅವರ ಅಸಂಖ್ಯಾತ ಅಭಿಮಾನಿ ಬ್ಲಾಗರ್‌ಗಳ ಆಶಯ.
ಇನ್ನು ಅನೌನ್ಸ್‌ಮೆಂಟ್‌ನ ಕುರಿತಾಗಿ ಹೇಳುವುದಾದರೆ, ವಿಶ್ವೇಶ್ವರ ಭಟ್ಟರ ವೆಬ್‌ಸೈಟು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವವರು ಭಾವಿ ಪತ್ರಿಕೆಯ ಹಾಲಿ ಹಿರಿಯ ಉಪಸಂಪಾದಕರು ಎಂಬ ಮಾತಿದೆ. ನಾಲ್ಕು ಸಾಲಿನ ಒಂದು ಪ್ಯಾರಾದಲ್ಲಿ ಒಂದೇ ವಾಕ್ಯವನ್ನು ಎರಡು ಬಾರಿ ಬರೆಯುವಷ್ಟು ಭಟ್ಟರು ದಡ್ಡರಲ್ಲ ಎಂಬುದು ಬಲ್ಲವರ ಅಭಿಮತ. ಭಟ್ಟರಿಗೆ ಗೊತ್ತಿಲ್ಲದಂತೆ ಈ ಅನೌನ್ಸ್‌ಮೆಂಟ್ ಹೊರಬಿದ್ದಿರಲೂಬಹುದು. ಭಟ್ಟರಿಗೆ ಹೊಸ ಪತ್ರಿಕೆ ಆರಂಭಿಸುವ ತುರ್ತು ಎಷ್ಟಿದೆಯೋ ಅದಕ್ಕಿಂತ ಹೆಚ್ಚು ತುರ್ತು ಅವರ ಜತೆ ಕೆಲಸ ಬಿಟ್ಟವರಿಗಿದೆ. ಅದರಲ್ಲೂ ಭಟ್ಟರ ಹೊರತಾಗಿ ಇನ್ನ್ಯಾವ ಸಂಪಾದಕನ ಕೈ ಕೆಳಗೂ ಕೆಲಸ ಮಾಡಲಾರೆ ಎಂದು ಧರ್ಮಸ್ಥಳದ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಿರುವವರು ಕೈ ಬಾಯಿ ಎಲ್ಲವೂ ಕಡಿಯುತ್ತಿದೆ. ಯಾವಾಗ ಶುರು ಮಾಡ್ತೀವೋ, ಯಾವಾಗ ನಮ್ಮ ಶತ್ರುಗಳ ಮೇಲೆ ಬೀಳ್ತೀವೋ, ಯಾವಾಗ ರವಿ ಬೆಳಗೆರೆ ಮುಂತಾದವರನ್ನು ಹಣಿಯುತ್ತೇವೋ ಎಂದು ಅವರು ಹಲ್ಲುಹಲ್ಲು ಕಡಿಯುತ್ತಿದ್ದಾರೆ. ಅತ್ಯುತ್ಸಾಹಿಗಳ ಪ್ರತಾಪದಿಂದಾಗಿ ವೆಬ್‌ಸೈಟು ಆರಂಭವಾಗಿ, ಸದ್ಯಕ್ಕೆ ಬಾಗಿಲು ಮುಚ್ಚಿಕೊಂಡು ರೀಲಾಂಚ್ ಆಗುವ ಸಂದೇಶ ಹೊದ್ದು ಮಲಗಿದೆ.
ಭಟ್ಟರು ದಿಲ್ಲಿಗೆ ಅರ್ಜೆಂಟಾಗಿ ಹೋಗಬೇಕಿದೆಯಂತೆ. ದಿಲ್ಲಿಯಲ್ಲಿ ಈಗ ವಿಪರೀತ ಚಳಿ. ಒಂದೆರಡು ಸ್ವೆಟರು, ಜರ್ಕಿನ್ ಹೆಚ್ಚೇ ತೆಗೆದುಕೊಂಡು ಹೋಗಲಿ ಎಂಬುದು ಸಂಪಾದಕೀಯದ ಸಲಹೆ.
发表评论