Dear Sir, 
I have committed big mistake by putting loose comments on Facebook. I never meant any disrespect to language or people but unknowingly I have hurt peoples emotions and feelings. 
I am speaking from the core of my heart that I do not have any disregard towards Karnataka and its heritage i.e. language, people etc. I truly respect Kannadigas and also have so many good friends in Bangalore. 
I know I have committed a huge mistake and I am apologizing from the bottom of my heart. I am ready to do anything which is necessary to show my respect to the people and language of Karnataka. I cannot even express how much I am regretting after making this mistake. I would go myself and learn Kannada in next one year to show how much I respect the people and language. Please...Please...Please forgive me.  
 Thanks,
Chugh Robin


ಕನ್ನಡ ಕಲಿಕೆಯ ಪ್ರಸ್ತಾಪಕ್ಕೆ ಫಕ್ ಆಫ್ ಎಂದು ತಮ್ಮ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದ ಸಾಫ್ಟ್‌ವೇರ್ ಇಂಜಿನಿಯರ್ ರಾಬಿನ್ ಚುಗ್ ಸಂಪಾದಕೀಯಕ್ಕೆ ಕಳುಹಿಸಿರುವ ಇ-ಮೇಲ್ ಇದು. ಈಗಾಗಲೇ ರಾಬಿನ್ ಚುಗ್ ತನ್ನೊಂದಿಗೆ ಮಾತನಾಡಿದವರ ಬಳಿಯೂ ತನ್ನ ಅವಹೇಳನಕಾರಿ ನಿಲುವು-ಭಾಷೆಗೆ ಕ್ಷಮೆ ಯಾಚಿಸಿದ್ದಾನೆ. ತನ್ನ ಫೇಸ್‌ಬುಕ್ ನಲ್ಲೂ ಸಹ ಇಂಥದ್ದೇ ಸಾಲುಗಳನ್ನು ಬರೆದಿದ್ದಾನೆ. ಇಷ್ಟಾದ ಮೇಲೂ ವಿಷಯವನ್ನು ಬೆಳೆಸುವುದರಲ್ಲಿ ಯಾವ ಅರ್ಥವೂ ಇಲ್ಲ. ಇದು ನಮ್ಮ ಗೆಳೆಯರನೇಕರ ಅಭಿಪ್ರಾಯ. ನಮ್ಮ ನಿಲುವು ಸಹ ಅದೇ ಆಗಿದೆ.

ರಾಬಿನ್ ಚುಗ್ ಕರ್ನಾಟಕದಲ್ಲೇ ಇರಲಿ, ಇಲ್ಲೇ ತಮ್ಮ ಕೆಲಸ ಮಾಡಿಕೊಂಡು ಇರಲಿ. ಆತನೇ ಹೇಳಿಕೊಂಡಂತೆ ವರ್ಷದೊಳಗೆ ಕನ್ನಡ ಕಲಿಯಲಿ. ಇಲ್ಲಿನ ಜನರೊಂದಿಗೆ ಬೆರೆಯಲಿ. ಇದು ನಮ್ಮ ಆಶಯ.

ಆದರೆ ಬಹುಮುಖ್ಯ ಪ್ರಶ್ನೆ ಹಾಗೇ ಉಳಿದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿರುವ ವರದಿಯ ಕುರಿತು ಹಲವರು ಪ್ರಶ್ನಿಸುತ್ತಿದ್ದಾರೆ. ಇವರ ಪೈಕಿ ಕನ್ನಡಿಗರೂ ಇದ್ದಾರೆ. ಮೊದಲ ಲೇಖನದಲ್ಲೇ ನಾವು ಭಾಷೆಯನ್ನು ಯಾರ ಮೇಲೂ ಹೇರುವುದು ಸರಿಯಲ್ಲ, ಕಡ್ಡಾಯಗೊಳಿಸುವುದರಿಂದ ಎಲ್ಲ ಸಮಸ್ಯೆಗಳೂ ಬಗೆಹರಿಯುವುದಿಲ್ಲ ಎಂದು ಬರೆದಿದ್ದೆವು.

ಆದರೆ, ಕನ್ನಡ ನಾಡಿನಲ್ಲಿ ಹಿಂದಿ ಕಡ್ಡಾಯವಾಗಿದ್ದು ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆಗೆ ಯಾರಾದರೂ ದಯವಿಟ್ಟು ಉತ್ತರ ಕೊಡಿ. ಹಿಂದಿಯೂ ಸಹ ಕನ್ನಡದ ಹಾಗೆ ಈ ದೇಶದ ಭಾಷೆಗಳಲ್ಲಿ ಒಂದು. ಅದರ ಹೆಚ್ಚುಗಾರಿಕೆ ಏನೆಂದರೆ ಮೂರ‍್ನಾಲ್ಕು ರಾಜ್ಯಗಳಲ್ಲಿ ಆ ಭಾಷೆ ಅಥವಾ ಅದರ ಉಪಭಾಷೆಗಳು ಚಾಲ್ತಿಯಲ್ಲಿವೆ. ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತಕ್ಕೆ ಈ ಭಾಷೆಯ ಜತೆ ಯಾವ ಸಂಬಂಧವೂ ಇರಲಿಲ್ಲ. ಇಂಥ ಹಿಂದಿಯನ್ನು ಇಲ್ಲಿ ಕಡ್ಡಾಯಗೊಳಿಸಿದ್ದು ಯಾಕೆ? ನಮ್ಮ ಮಕ್ಕಳೆಲ್ಲ ಹಿಂದಿ ಕಲಿಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಯಾಕೆ?

ಕನ್ನಡ ಕಲಿಕೆ ಕಡ್ಡಾಯಗೊಳಿಸುವುದು ಸಂವಿಧಾನ ವಿರೋಧಿ ಎಂದು ನಮ್ಮ ಗೆಳೆಯರೊಬ್ಬರು ಹೇಳಿದ್ದಾರೆ. ಹಾಗಿದ್ದರೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಿಂದಿ ಕಲಿಕೆ ಕರ್ನಾಟಕದಲ್ಲಿ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಾಗಿದ್ದು ಸಂವಿಧಾನಪರವಾದ ನಿರ್ಣಯವೇ? ಯಾವುದೇ ಕೇಂದ್ರ ಸರ್ಕಾರ ಬಂದರೂ ಕೇಂದ್ರ ಸರ್ಕಾರದ ಇಲಾಖೆಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಹಿಂದಿಯನ್ನು ಬಲವಂತವಾಗಿ ತುರುಕಲಾಗುತ್ತದೆ. ಇದು ಸಂವಿಧಾನ ಬಾಹಿರವಲ್ಲವೆ? ಹಿಂದಿಯೇತರ ಸಿಬ್ಬಂದಿಗೆ ಬ್ಯಾಂಕುಗಳಲ್ಲಿ, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕಡ್ಡಾಯವಾಗಿ ಹಿಂದಿಯನ್ನು ಕಲಿಸಲಾಗುತ್ತಿಲ್ಲವೇ?

ಹಾಗೆ ನೋಡಿದರೆ, ಕರ್ನಾಟಕದಲ್ಲಿ ಕನ್ನಡೇತರರು ಕನ್ನಡ ಕಲಿಯಲಿ ಎಂದು ಅಪೇಕ್ಷಿಸುವುದು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದಕ್ಕಿಂತ ಹೆಚ್ಚು ಯೋಗ್ಯವಾದ ಕ್ರಮವಲ್ಲವೇ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೀಡಿರುವುದು ವರದಿಯಷ್ಟೆ. ಇಂಥ ವರದಿಗಳನ್ನು ಚಂಪಾ, ಬರಗೂರು ಮತ್ತಿನ್ನಿತರರು ನೀಡಿದ್ದರು. ಯಾರ ಶಿಫಾರಸುಗಳೂ ಇನ್ನೂ ಜಾರಿಯಾಗಿಲ್ಲ. ಚಂದ್ರು ಅವರ ಶಿಫಾರಸುಗಳು ಜಾರಿಯಾದೀತೆಂಬ ನಿರೀಕ್ಷೆಗಳೂ ಇಲ್ಲ.

ಆದರೆ ಇಂಥ ಪ್ರಸ್ತಾಪಗಳು ಬಂದಾಗ ಇಂಗ್ಲಿಷ್ ಮೀಡಿಯಾ ಮೈಕೊಡವಿ ಎದ್ದು ನಿಲ್ಲುವುದು, ವಲಸೆ ಬಂದವರು ಬಾಯಿಗೆ ಬಂದಂತೆ ಮಾತನಾಡುವುದು ನಡೆದೇ ಇದೆ.  ಹಿಂದೆ ಇಂಥದ್ದೇ ಒಂದು ಗುಂಪು ಬೆಂಗಳೂರು ಬಿಟ್ಟು ಹೋಗುತ್ತಿದ್ದೇವೆ (ಐ ಆಮ್ ಲೀವಿಂಗ್ ಬ್ಯಾಂಗಲೋರ್) ಎಂಬ ಅಭಿಯಾನ ಆರಂಭಿಸಿತ್ತು.

ಭಾಷೆಯ ಆಧಾರದಲ್ಲಿಯೇ ರಾಜ್ಯಗಳ ವಿಂಗಡಣೆಯಾಗಿದೆ. ಕನ್ನಡಿಗರು ಇರುವ ಪ್ರದೇಶವೇ ಕರ್ನಾಟಕವಾಗಿದೆ. ಭಾರತ ಒಕ್ಕೂಟದ ಭಾಗವಾಗಿ ಕರ್ನಾಟಕ ತನ್ನ ಭಾಷೆ-ಉಪಭಾಷೆಗಳನ್ನು ಉಳಿಸಿಕೊಳ್ಳುವ ಹಕ್ಕು ಹೊಂದಿದೆ. ಅದನ್ನು ಎಲ್ಲರೂ ಅರಿತುಕೊಳ್ಳುವುದು ಒಳ್ಳೆಯದು.
0 komentar

Blog Archive