ಜನರನ್ನು ಮೌಢ್ಯದ ಅಂಧಕಾರದಲ್ಲಿ ಮುಳುಗಿಸಲು ಯತ್ನಿಸುತ್ತಿರುವ ಕಪಟ ಜ್ಯೋತಿಷಿಗಳು ಹಾಗು ಅವರಿಗೆ ವೇದಿಕೆ ಒದಗಿಸುತ್ತಿರುವ ಟಿವಿ ಚಾನಲ್‌ಗಳಿಗೆ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಚಾಟಿ ಬೀಸಿದ್ದಾರೆ. ವಿಜಯ ಕರ್ನಾಟಕದಲ್ಲಿ ನೆಟ್ ನೋಟ ಅಂಕಣ ಬರೆಯುವ ಹಾಲ್ದೊಡ್ಡೇರಿಯವರು ಹೇಗೆ ಕಪಟ ಜ್ಯೋತಿಷಿಗಳು ನಮ್ಮ ಮೀಡಿಯಾಗಳಲ್ಲಿ ವಿಜೃಂಭಿಸುತ್ತಿದ್ದಾರೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಭೀತಿಯನ್ನೇ ಸರಕು ಮಾಡಿಕೊಂಡಿರುವ ಮಾಧ್ಯಮಗಳು ಪ್ರಳಯದ ಭಯವನ್ನು ಸೃಷ್ಟಿಸುತ್ತಿರುವ ಕುರಿತು ಅವರು ಈ ಲೇಖನದಲ್ಲಿ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.![]() |
| ಸುಧೀಂದ್ರ ಹಾಲ್ದೊಡ್ಡೇರಿ |
ಹಾಲ್ದೊಡ್ಡೇರಿಯವರಿಗೆ ನಮ್ಮ ಥ್ಯಾಂಕ್ಸ್. ಹಾಗೆಯೇ ವಿಜಯ ಕರ್ನಾಟಕ ಪತ್ರಿಕೆಗೂ ಕೂಡ. ಈ ಕೆಳಗಿನ ಲಿಂಕ್ ಬಳಸಿ ನೀವು ಹಾಲ್ದೊಡ್ಡೇರಿಯವರ ಲೇಖನ ಓದಬಹುದು.
http://www.vijaykarnatakaepaper.com/pdf/2011/05/16/20110516a_008101002.jpg
ಅಥವಾ ಇಲ್ಲಿ ಒದಗಿಸಿರುವ ಪಿಡಿಎಫ್ ಚಿತ್ರದ ಮೇಲೂ ಕ್ಲಿಕ್ ಮಾಡಿ ಲೇಖನ ಓದಬಹುದು.
ಅಂದ ಹಾಗೆ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನದ ಕುರಿತು ಹಾಲ್ದೊಡ್ಡೇರಿಯವರು ಫೇಸ್‌ಬುಕ್‌ನಲ್ಲಿ ಬರೆದದ್ದು ಹೀಗೆ: ಶ್ಲಾಘನೀಯ ಪ್ರಯತ್ನ, ನಿಮ್ಮೊಂದಿಗಿದ್ದೇನೆ. ಇಂದಿನ ವಿಜಯ ಕರ್ನಾಟಕ ಅಂಕಣ ಲೇಖನದ ಮೂಲಕ ನನ್ನದೊಂದು ಪುಟ್ಟ ಪ್ರಯತ್ನ ನಡೆದಿದೆ.
-ಸಂ

发表评论