
ಹೌದು, ಸಮಯ ಚಾನಲ್ ಮಾರಾಟಕ್ಕಿದೆ. ಅದರ ಮಾಲೀಕರೊಂದಿಗೆ ಮಾತುಕತೆಯಲ್ಲಿದ್ದೇನೆ. ಆದರೂ ಇನ್ನೂ ಈ ಕುರಿತ ಒಡಂಬಡಿಕೆ ಇನ್ನೂ ಆಗಿಲ್ಲ.ಬೆಂಗಳೂರು ಮಿರರ್ ಪತ್ರಿಕೆಗೆ ಎಚ್.ಡಿ.ಕುಮಾರಸ್ವಾಮಿ ಹೇಳಿರುವ ಮಾತು ಇದು.
ಸಮಯ ಟಿವಿಯನ್ನು ಕುಮಾರಸ್ವಾಮಿ ಕೊಳ್ಳಲಿದ್ದಾರೆ ಎಂಬ ಗುಸುಗುಸು ಸುದ್ದಿ ನಿಜವಾಗುವ ಸಮಯ ಹತ್ತಿರವಾಗುತ್ತಿರುವಂತೆ ಬೆಂಗಳೂರು ಮಿರರ್ ಪತ್ರಿಕೆ ಈ ಬಗ್ಗೆ ಮೊದಲು ಬೆಳಕು ಚೆಲ್ಲಿದೆ.

ಸದ್ಯ ಸುವರ್ಣ ನ್ಯೂಸ್‌ನ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್‌ಗೂ ಅದರ ಮಾಲೀಕರಾದ ರಾಜೀವ್ ಚಂದ್ರಶೇಖರ್ ಅವರಿಗೂ ಅಷ್ಟಾಗಿ ಆಗಿಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇದ್ದವು. ಹೀಗಾಗಿ ನ್ಯೂಸ್ ಚಾನಲ್ ಆಗಲಿರುವ ಕಸ್ತೂರಿಗೆ ಅವರು ವಲಸೆ ಹೋಗುತ್ತಾರೆ ಎಂಬುದು ಗುಸುಗುಸು ಆಗಿತ್ತು. ಆದರೆ ಸಮಯ ಚಾನಲ್ ಕೊಂಡು ಕುಮಾರಸ್ವಾಮಿಯವರು ಅದನ್ನು ತಮ್ಮ ಆತ್ಮೀಯವಾಗಿರುವ ರಂಗನಾಥ್ ಅವರ ಉಸ್ತುವಾರಿಗೆ ಒಪ್ಪಿಸಲಿದ್ದಾರೆ ಎಂಬುದು ಹೊಸ ಸುದ್ದಿ.

ಕಸ್ತೂರಿ ಟಿವಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರ ಒಡೆತನದಲ್ಲಿದೆ. ರಾಧಿಕಾ ಮತ್ತು ಕುಮಾರಸ್ವಾಮಿಯವರ ಸಂಬಂಧದ ಕುರಿತು ಯಾವುದೇ ಸಂಶಯ ಈಗ ಉಳಿದುಕೊಂಡಿಲ್ಲ. ಅವರಿಗೆ ಶಮಿಕಾ ಎಂಬ ಮಗಳೂ ಇದ್ದಾಳೆ. ಹೀಗಾಗಿ ತಮ್ಮ ಮತ್ತೋರ್ವ ಪತ್ನಿಗಾಗಿ ಕುಮಾರಸ್ವಾಮಿ ಚಾನಲ್ ಕೊಳ್ಳುವ ವಿಷಯ ಈಗ ಮಾಧ್ಯಮರಂಗದಲ್ಲಿ ಹಾಟ್‌ಹಾಟ್ ಚರ್ಚೆಯಾಗಿದೆ.
发表评论