ಪ್ರಜಾವಾಣಿ ಸಂಪಾದಕೀಯ ಧೋರಣೆ ಬದಲಾಗಿದೆ ಮತ್ತು ಆಳುವ ಸರ್ಕಾರದ ಪರವಾಗಿದೆ ಎಂದು ನಿಮಗನ್ನಿಸುತ್ತದೆಯೇ? ಎಂಬ ಪ್ರಶ್ನೆಯಿಟ್ಟುಕೊಂಡು ಕಳೆದ ವಾರದ ಸಮೀಕ್ಷೆ ನಡೆಸಿದ್ದೆವು. ಈ ಬಾರಿ ಓಟು ಮಾಡಿದವರ ಸಂಖ್ಯೆ ಹೆಚ್ಚು. ೨೬೪ ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಪೈಕಿ ೧೩೫ ಮಂದಿ ಪ್ರಜಾವಾಣಿ ಬದಲಾಗಿದೆ ಮತ್ತು ಆಳುವ ಸರ್ಕಾರದ ಪರವಾಗಿದೆ ಎಂದು ಹೇಳಿದ್ದಾರೆ. ೧೦೦ ಮಂದಿ ಇದಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿದ್ದಾರೆ. ಗೊತ್ತಿಲ್ಲ ಎಂದು ಹೇಳಿದವರು ೨೭ ಮಂದಿ.
ಶೇ.೫೧ರಷ್ಟು ಮಂದಿಗೆ ಪ್ರಜಾವಾಣಿ ಬದಲಾವಣೆ ಆಗಿರುವುದು ಮನವರಿಕೆ ಆಗಿದ್ದರೆ, ಶೇ.೩೭ ರಷ್ಟು ಜನರು ಇದನ್ನು ಒಪ್ಪುವುದಿಲ್ಲ. ಗೊತ್ತಿಲ್ಲ ಅನ್ನುವವರು ಶೇ.೧೦ರಷ್ಟಿದ್ದಾರೆ. ಮತ ಚಲಾಯಿಸಿದ ಎಲ್ಲರಿಗೂ ಥ್ಯಾಂಕ್ಸ್. ಪ್ರಜಾವಾಣಿ ಹೇಗಿರಬೇಕು ಎಂಬುದು ಸದ್ಯಕ್ಕೆ ಕಾಲ-ದೇಶಗಳೇ ಉತ್ತರ ಕೊಡಬೇಕು.
ಈ ವಾರದ ಸಮೀಕ್ಷೆ ಜನಶ್ರೀ ಎಂಬ ಹೊಸ ನ್ಯೂಸ್ ಚಾನಲ್ ಕುರಿತಾಗಿದೆ. ಬಳ್ಳಾರಿ ರೆಡ್ಡಿಗಳು ಆರಂಭಿಸುತ್ತಿರುವ ಕನ್ನಡ ನ್ಯೂಸ್ ಚಾನಲ್ ಜನಶ್ರೀ. ಇದಕ್ಕೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ನೇತೃತ್ವ ವಹಿಸಿಕೊಂಡಿದ್ದಾರೆ. ರವಿ ಬೆಳಗೆರೆ ಮತ್ತು ರೆಡ್ಡಿಗಳ ನಡುವಿನ ಸುಮಧುರ ಸಂಬಂಧ ಎಲ್ಲರಿಗೂ ಗೊತ್ತಿರುವಂಥದ್ದೇ. ರವಿ ಬೆಳಗೆರೆ ಪತ್ರಕರ್ತನ ವ್ಯಾಪ್ತಿಯನ್ನು ಮೀರಿ ರೆಡ್ಡಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣ ನಡೆಸಿದವರು. ಶ್ರೀರಾಮುಲು ಅವರನ್ನು ಇವತ್ತಿಗೂ ತನ್ನ ತಮ್ಮ ಎಂದೇ ಬೆಳಗೆರೆ ಹೇಳಿಕೊಳ್ಳುತ್ತಾರೆ.
ಹೀಗಾಗಿ ಬೆಳಗೆರೆ ಜನಶ್ರೀ ನೇತೃತ್ವ ವಹಿಸಿರುವುದು ಅಚ್ಚರಿಯ ಬೆಳವಣಿಗೆಯೇನಲ್ಲ. ಆದರೆ ಕನ್ನಡದಲ್ಲಿ ಆರಂಭವಾಗುತ್ತಿರುವ ಇನ್ನೊಂದು ನ್ಯೂಸ್ ಚಾನಲ್ ಸಕ್ಸಸ್ ಆಗುವುದು ಅಷ್ಟು ಸುಲಭದ ಮಾತೇನಲ್ಲ. ಈಗಾಗಲೇ ಟಿವಿ೯, ಸಮಯ, ಸುವರ್ಣ ನ್ಯೂಸ್, ಉದಯ ನ್ಯೂಸ್ ಚಾನಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜನಶ್ರೀಗೂ ವೀಕ್ಷಕ ವಲಯದಲ್ಲಿ ಸ್ಪೇಸ್ ಸಿಗಬಹುದಾ?
ಇನ್ನು ರವಿ ಬೆಳಗೆರೆ ಯಶಸ್ವಿ ಪತ್ರಕರ್ತ ಮತ್ತು ಪತ್ರಿಕೋದ್ಯಮಿ ಎಂಬುದೇನೋ ನಿಜ. ಆದರೆ ಈ ಯಶಸ್ಸು ಜನಶ್ರೀಯಲ್ಲಿ ಮುಂದುವರೆಯುತ್ತದೆ ಎಂದು ಸಾರಾಸಗಟಾಗಿ ಹೇಳಲಾಗದು.
ಸವಾಲುಗಳು ನೂರಾರಿವೆ. ಮೊಟ್ಟ ಮೊದಲನೆಯದಾಗಿ ಚಾನಲ್ ರೆಡ್ಡಿಗಳದು ಎಂಬ ಕಾರಣಕ್ಕೇ ಜನರು ಅಸಡ್ಡೆ ತೋರಬಹುದಾದ ಸಂಭವವಿದೆ. ರವಿ ಬೆಳಗೆರೆಯ ಶೋಗಳನ್ನು ಜನ ನೋಡಬಹುದು ಎಂದಿಟ್ಟುಕೊಳ್ಳೋಣ, ಉಳಿದ ಕಾರ್ಯಕ್ರಮಗಳ ಕಥೆ? ಹೇಳಿ ಕೇಳಿ ಇದು ಸುದ್ದಿವಾಹಿನಿ. ರಾಜಕೀಯ ಸುದ್ದಿಗಳಲ್ಲಿ ರೆಡ್ಡಿಗಳ ವೃತ್ತಾಂತವೇ ಕಂಗೊಳಿಸತೊಡಗಿದರೆ ಅದನ್ನು ಯಾರು ತಾನೇ ನೋಡುತ್ತಾರೆ?
ಇದನ್ನೆಲ್ಲ ಮೀರಿ ರವಿ ಬೆಳಗೆರೆ ಏನನ್ನಾದರೂ ಹೊಸತನ್ನು ಕೊಡಲು ಸಾಧ್ಯವೇ? ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆ ಎಂದು ನಿಮಗನ್ನಿಸುತ್ತದೆಯೇ? ಹೌದು, ಇಲ್ಲ, ಗೊತ್ತಿಲ್ಲ ಎಂಬ ಮೂರು ಉತ್ತರಗಳು ನಿಮಗಾಗಿ. ದಯಮಾಡಿ ಓಟ್ ಮಾಡಿ. ಅಂದ ಹಾಗೆ ಜನಶ್ರೀ ನ್ಯೂಸ್ ಚಾನಲ್ ಫೆ.೧೮ರಂದು ಆರಂಭಗೊಳ್ಳಲಿದೆ.
ಕೊನೆ ಕುಟುಕು: ರವಿ ಬೆಳಗೆರೆ ಜನಶ್ರೀ ಸೇರುತ್ತಿರುವ ಕುರಿತು ಫೇಸ್‌ಬುಕ್‌ನಲ್ಲಿ ಓದುಗರೊಬ್ಬರು ಬರೆದ ಅಭಿಪ್ರಾಯ ಹೀಗಿದೆ. Inmele tvli Hi Blore!! Beligge 8 kke Khas bhat, Madhyana 2 kke Bottom Item, Sanje 7ge Hello, rathri malago hothalli love lovike & Midnightnalli Keli !

发表评论