ವಿಶ್ವೇಶ್ವರ ಭಟ್ಟರು ಕನ್ನಡಪ್ರಭಕ್ಕೆ ಬಂದಾಗಿನಿಂದ ಸ್ವಲ್ಪ ಸಮಯ ಕೊಡಿ, ಹೊಸ ವ್ಯವಸ್ಥೆಗೆ ನಾನು ಹೊಂದಿಕೊಳ್ಳಬೇಕು. ಆಮೇಲೆ ಒಂದಿಷ್ಟು ಪ್ರಯೋಗ ಮಾಡ್ತೀನಿ ಎನ್ನುತ್ತಿದ್ದರು. ನಿಧಾನವಾಗಿ ಅವರು ಈಗ ಫಾರ‍್ಮ್‌ಗೆ ಬಂದ ಹಾಗೆ ಕಾಣುತ್ತದೆ. ನೋಡ್ತಾ ಇರಿ, ಏನೇನು ಮಾಡ್ತೀವಿ ಎಂಬ ಘೋಷವಾಕ್ಯದಡಿ ಭಟ್ಟರು ಹೊಸ ಅಂಕಣಗಳನ್ನು ಶುರು ಮಾಡಿದರು. ಮೊದಲ ಬಾರಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅಂಕಣಕಾರರನ್ನಾಗಿಸಿದರು. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ ತಮ್ಮ ಅಂಕಣಗಳನ್ನೆಲ್ಲ ಇಲ್ಲೂ ಆರಂಭಿಸಿದರು. ತಪ್ಪಾಯ್ತು, ತಿದ್ಕೋತೀವಿ ಅಂಕಣದ ಮೂಲಕ ಓದುಗರ ಜತೆ ನಿತ್ಯ ಸಂವಾದ ಆರಂಭಿಸಿದರು. ಇನ್ನು ಅವರ ಬಳಗದ ಪಿ.ತ್ಯಾಗರಾಜ್, ರಾಧಾಕೃಷ್ಣ ಬಡ್ತಿ, ಪ್ರತಾಪ ಸಿಂಹ, ಕೆ.ವಿ.ಪ್ರಭಾಕರ್, ಚೈತನ್ಯ ಹೆಗಡೆ ಮತ್ತಿತರರ ಅಂಕಣಗಳೂ ಶುರುವಾದವು.
ಭಟ್ಟರು ಕ್ರಿಯಾಶೀಲ ಸಂಪಾದಕರು. ಹೊಸತನ್ನು ಕೊಡಬೇಕು ಎಂದು ಹವಣಿಸುವವರು. ಹೀಗಾಗಿ ಕನ್ನಡಪ್ರಭದಲ್ಲಿ ಭಟ್ಟರ ಛಾಪು ಕಾಣಿಸುತ್ತಿದೆ. ಆದರೆ ಇವತ್ತಿನ ಕನ್ನಡಪ್ರಭ ನೋಡಿದಾಗ ನಿಜಕ್ಕೂ ನಿರಾಶೆಯಾಯಿತು. ಹೊಸತನ್ನು ಕೊಡುವ ಶಕ್ತಿಯಿರುವ ಭಟ್ಟರು ಹಳಸಲನ್ನು ಬಡಿಸಲು ಹೊರಟಿರುವುದು ಆಶ್ಚರ್ಯ ತರಿಸಿತು.
ದೇಶದ ಮಹತ್ವದ ರಾಜಕಾರಣಿಯೊಬ್ಬರಿಂದ ಕಾಲಂ ಬರೆಸುತ್ತೇವೆ ಎಂದು ಭಟ್ಟರು ಕನ್ನಡಪ್ರಭದಲ್ಲಿ ಅನೌನ್ಸ್‌ಮೆಂಟ್ ಕೊಟ್ಟಿದ್ದರು. ಅದೇ ಪ್ರಕಾರ ಇಂದು ಎಲ್.ಕೆ.ಅಡ್ವಾಣಿಯವರ ಅಂಕಣ ೯ನೇ ಪುಟದಲ್ಲಿ ಪ್ರಕಟವಾಗಿದೆ. ನನ್ನ ದೇಶ, ನನ್ನ ಜನ ಎಂಬ ಶೀರ್ಷಿಕೆಯ ಅಂಕಣದಡಿಯಲ್ಲಿ ಇಂದು ಪ್ರಕಟವಾಗಿರುವ ಲೇಖನ: ಹಾಗಾದರೆ ರಾಜಕಾರಣಿಗಳೆಲ್ಲರೂ ಭ್ರಷ್ಟರೇ?
ಇದನ್ನು ಓದಿದ ತಕ್ಷಣವೇ ಔಟ್‌ಡೇಟೆಟ್ ಲೇಖನ ಎಂದು ನಿಮಗೆ ಅನ್ನಿಸಿರಬಹುದು, ಅನ್ನಿಸಲೇಬೇಕು. ಯಾಕೆಂದರೆ ಇದು ಅಡ್ವಾಣಿಯವರ ಹಳೆಯ ಲೇಖನ. ಅದನ್ನು ಬರೆದಿರುವುದು ಕನ್ನಡಪ್ರಭಕ್ಕಾಗಿಯೂ ಅಲ್ಲ. ಅಡ್ವಾಣಿಯವರ ಬ್ಲಾಗ್‌ನಲ್ಲಿ ಇದೇ ಲೇಖನ ಏಪ್ರಿಲ್ ೧೨ರಂದು ಪ್ರಕಟವಾಗಿದೆ. ಮೂರು ವಾರಗಳ ಹಿಂದೆಯೇ ಪ್ರಕಟಗೊಂಡಿದ್ದ ಲೇಖನದ ಯಥಾವತ್ತು ತರ್ಜುಮೆ ಇವತ್ತು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.
ಎರಡು ಸಿಂಪಲ್ ಆದ ಪ್ರಶ್ನೆಗಳು.
ಇಂಟರ್‌ನೆಟ್ ನೋಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೀಗಿರುವಾಗ ಅಡ್ವಾಣಿಯವರ ಬ್ಲಾಗ್‌ನಲ್ಲಿ ಎಂದೋ ಪ್ರಕಟಗೊಂಡ ಹಳಸಲು ಲೇಖನವನ್ನು ಹೊಸ ಅಂಕಣದ ರೂಪದಲ್ಲಿ ಕನ್ನಡ ಓದುಗರಿಗೆ ಪ್ರಸ್ತುತ ಪಡಿಸುವ ಅಗತ್ಯ ಇತ್ತೆ?
ಒಂದು ವೇಳೆ, ಅಡ್ವಾಣಿಯವರ ಬ್ಲಾಗ್‌ನಿಂದ ಅವರ ಅನುಮತಿ ಪಡೆದು ತರ್ಜುಮೆ ಮಾಡಿ, ಅಂಕಣ ರೂಪದಲ್ಲಿ ಪ್ರಕಟಿಸುವುದಾದರೆ ಅದನ್ನು ಓದುಗರಿಗೆ ಹೇಳಬಹುದಿತ್ತಲ್ಲವೇ?
ಇವರೆಡೂ ಪ್ರಶ್ನೆಗಳನ್ನು ಹೊರತುಪಡಿಸಿಯೂ ರಾಜಕಾರಣಿಗಳಿಂದ ಅಂಕಣಗಳನ್ನು ಬರೆಸುವ ಕುರಿತೇ ತಕರಾರುಗಳು ಇವೆ. ರಾಜಕಾರಣಿಗಳು ಸಹಜವಾಗಿಯೇ ತಮ್ಮ ಹಾಗು ತಮ್ಮ ಪಕ್ಷದ ಇಮೇಜುಗಳನ್ನು ಬೆಳೆಸಿಕೊಳ್ಳಲು ಅಂಕಣಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥವು ಕನ್ನಡ ಓದುಗರಿಗೆ ಬೇಕೆ? ಪತ್ರಿಕೆಗಳು ಪಕ್ಷಾತೀತ ನಿಲುವುಗಳನ್ನು ಮಂಡಿಸಬೇಕು ಎಂಬ ನೈತಿಕ ಚೌಕಟ್ಟಿಗೆ ಇವು ಅಡಚಣೆಯಲ್ಲವೇ? ಒಂದು ವೇಳೆ ಅಡ್ವಾಣಿಯವರಿಂದ ಅಂಕಣ ಬರೆಸಲೇಬೇಕೆಂದಿದ್ದರೆ ಕನ್ನಡಪ್ರಭಕ್ಕಾಗಿ ಪ್ರತ್ಯೇಕ ಲೇಖನಗಳನ್ನು ಬರೆಸಬಹುದಿತ್ತಲ್ಲವೇ? ಕನ್ನಡ ಓದುಗರೇಕೆ ತಂಗಳು ಅಡುಗೆ ಸ್ವೀಕರಿಸಬೇಕು?
ತಪ್ಪಾಗಿದೆ, ತಿದ್ಕೋತಾರಾ? ಕಾದು ನೋಡೋಣ.
ಅಡ್ವಾಣಿಯವರ ಬ್ಲಾಗ್ ನಲ್ಲಿ ಏ.12ರಂದು ಪ್ರಕಟವಾಗಿರುವ ಮೂಲ ಲೇಖನದ ಲಿಂಕ್:
http://blog.lkadvani.in/blog-in-english/the-anna-hazare-episode
ಇವತ್ತಿನ (ಮೇ.3) ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ತರ್ಜುಮೆಗೊಂಡ ಲೇಖನದ ಲಿಂಕ್:
http://www.kannadaprabha.com/NewsItems.asp?ID=KPH20110502210408&Title=Headlines&lTitle=%AE%DA%C3%A8%DB%AB%DA+%D1%DA%DF%A6%A7&Topic=0&ndate=5/3/2011&Dist=0

发表评论