ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕ ತೊರೆದ ಕಥೆಯ ಕುರಿತು ಬಣ್ಣಬಣ್ಣದ ಕಥೆಗಳು ಹುಟ್ಟಿಕೊಂಡಿವೆ. ಒಬ್ಬೊಬ್ಬರ ಬಾಯಲ್ಲಿ ಒಂದೊಂದು ಮಾತು. ಮೀಡಿಯಾ ಮಂದಿಗೆ ಭಟ್ಟರ ನಿರ್ಗಮನದ ಸುದ್ದಿಯೇ ರಸಗವಳ. ಹೀಗಿರುವಾಗ ‘ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಮಾತನಾಡುತ್ತಿರುವವರೇ ಹೆಚ್ಚು. ಈ ನಡುವೆ ಭಟ್ಟರ ನಿರ್ಗಮನ ಕುರಿತು ಅಗ್ನಿ ಪತ್ರಿಕೆಯ ಶ್ರೀಧರ್ ಬರೆದಿರುವ ಮಾತುಗಳು ‘ಆಳಿಗೊಂದು ಕಲ್ಲು ವರಸೆಗೆ ಭಿನ್ನವಾಗಿವೆ. ಸತ್ಯಕ್ಕೆ ಹಲವು ಮುಖಗಳಿರುತ್ತವೆ. ಅವುಗಳನ್ನು ಹುಡುಕುವ ತಾಳ್ಮೆ ಮತ್ತು ಸಂಯಮ ನಮಗಿರಬೇಕು ಅಷ್ಟೆ. ‘ವಿಶ್ವೇಶ್ವರ ಭಟ್ಟರ ಬಗ್ಗೆ ಯಾರೂ ಮರುಕ ತೋರುವ ಅಥವಾ ಅನವಶ್ಯಕವಾಗಿ ಜರೆಯುವ ಅಗತ್ಯ ನನಗೆ ಕಾಣುತ್ತಿಲ್ಲ ಎಂಬ ಶ್ರೀಧರ್ ಮಾತು ಸಾಕಷ್ಟು ಕುತೂಹಲಕರವಾಗಿದೆ. 
0 komentar

Blog Archive