![]() |
| ಡಾ.ವಿ.ಪಿ.ನಿರಂಜನಾರಾಧ್ಯ |
ಈ ಸಂಬಂಧ ಆಯೋಗದ ಮತ್ತೊಬ್ಬ ಸದಸ್ಯರಾದ ಡಾ. ವಿ.ಪಿ.ನಿರಂಜನಾರಾಧ್ಯ ಅವರ ಪ್ರತಿಕ್ರಿಯೆಯನ್ನು ಕೋರಿ ಸಂಪಾದಕೀಯ ಪತ್ರ ಬರೆದಿತ್ತು. ನಿರಂಜನಾರಾಧ್ಯರು ತಮ್ಮ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪ್ರತಿಕ್ರಿಯೆಯ ಪೂರ್ಣಪಾಠ ಇಲ್ಲಿದೆ.
Dear friends,
I thank Mounesh for bringing this inhuman act in the name of reality show into limelight. It is gross violation of child’s right to dignified life and nothing but a heinous crime and assault on the very life and dignity of the child. The Karnataka State Commission for Protection Child Rights takes this as suo-moto complaint based on this report and certainly we initiate enquiry on this matter and ensure justice to child. We will also explore the possibility of issuing strict guidelines to media particularly visual media to maintain procedures and protocols while involving children in any programme including the reality shows. Thanks for bringing for the commission notice.
Niranjanaradhya.V.P
Member-KSCPCR
(ಡಾ.ವಿ.ಪಿ.ನಿರಂಜನಾರಾಧ್ಯ ಕರ್ನಾಟಕದ ಮಹತ್ವದ ಶಿಕ್ಷಣ ತಜ್ಞರಲ್ಲಿ ಒಬ್ಬರು. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟವರು. ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳ ಕುರಿತು ಅನೇಕ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಾತನಾಡಿದ್ದಾರೆ, ಲೇಖನಗಳನ್ನು ಬರೆದಿದ್ದಾರೆ.)
ನಿರಂಜನಾರಾಧ್ಯರು ತಮ್ಮ ಪ್ರತಿಕ್ರಿಯೆಯಲ್ಲಿ ಬಹಳ ಮಹತ್ವದ ಮತ್ತೊಂದು ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಎಲ್ಲ ಮಾಧ್ಯಮಗಳಿಗೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಒಂದು ಕಟ್ಟುನಿಟ್ಟಾದ ಮಾರ್ಗಸೂಚಿಯೊಂದನ್ನು ನೀಡಲು ಅವರು ನಿರ್ಧರಿಸಿದ್ದಾರೆ. ರಿಯಾಲಿಟಿ ಶೋಗಳೂ ಸೇರಿದಂತೆ ಮಕ್ಕಳನ್ನು ಬಳಸಿಕೊಂಡು ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗು ಕಟ್ಟಳೆಗಳನ್ನು ಈ ಮಾರ್ಗಸೂಚಿ ಒಳಗೊಂಡಿರುತ್ತದೆ.
ಸಂಗೀತ, ನೃತ್ಯ ಸ್ಪರ್ಧೆಗಳ ರಿಯಾಲಿಟಿ ಶೋಗಳಲ್ಲೂ ಸಹ ಮಕ್ಕಳ ಮನಸಿಗೆ ಘಾಸಿಯಾಗುವಂತೆ ನಡೆದುಕೊಳ್ಳಲಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಸಹ ನಿಲ್ಲದೇ ಹೋದರೆ, ರಿಯಾಲಿಟಿ ಶೋಗಳಲ್ಲಿ ಸೋತ ಮಕ್ಕಳು ಖಿನ್ನತೆಗೆ ಒಳಗಾಗುವ, ಆತ್ಮಹತ್ಯೆಯಂಥ ಅತಿರೇಕಕ್ಕೆ ಕೈ ಹಾಕುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ ಆಯೋಗದ ಈ ನಿರ್ಧಾರ ಸ್ವಾಗತಾರ್ಹವಾದುದು.
ಮತ್ತೊಮ್ಮೆ ಇಂಥ ಒಂದು ಸಣ್ಣ ಸಂಚಲನಕ್ಕೆ ಕಾರಣರಾದ ಮೌನೇಶ್ ಸೇರಿದಂತೆ ಎಲ್ಲ ಬ್ಲಾಗರ್‌ಗಳನ್ನು ಅಭಿನಂದಿಸುತ್ತೇವೆ. ಸಂಪಾದಕೀಯದಲ್ಲಿ ಈ ಕುರಿತು ತೀವ್ರವಾಗಿ ಸ್ಪಂದಿಸಿದ ಉಮಾಪತಿ, ಉಷಾ ಕಟ್ಟೆಮನೆ, ಟೀನಾ ಶಶಿಕಾಂತ್, ಮಧುಭಟ್. ಪದ್ಯಾನ ರಾಮಚಂದ್ರ, ಸುಘೋಷ್ ನಿಗಳೆ, ಹಂಸಾನದಿ, ಕವಿತಾ, ಗಿರಿ, ಅಮಿತಾ, ಅರಕಲಗೂಡು ಜಯಕುಮಾರ್, ಮಣಿ ಮತ್ತಿತರ ಎಲ್ಲರಿಗೂ ಕೃತಜ್ಞತೆಗಳು. ಕನ್ನಡ ಅಂತರ್ಜಾಲವೂ ಒಂದು ಗಂಭೀರ ಮಾಧ್ಯಮ ಅನ್ನೋದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತು ಮಾಡಿದೆ.
ಅಂದಹಾಗೆ ಜನರಲ್ಲಿ ಪ್ರಳಯದ ಭೀತಿ ಸೃಷ್ಟಿಸಿ ಕಾಸು ಮಾಡಿಕೊಳ್ಳುತ್ತಿರುವ ಆ ವಿಕೃತ ಜ್ಯೋತಿಷಿಯ ಕುರಿತೂ ನಾವು ಒಂದು ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಬೇಕಿದೆ. ಆ ಕುರಿತು ಮುಂದೆ ಬರೆಯುತ್ತೇವೆ.

发表评论