ಇಂಗ್ಲಿಷ್ ಚಾನಲ್‌ಗಳು ನಡೆಸುವ ಸಂವಾದ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಅನುಕರಿಸಿ ಕನ್ನಡ ನ್ಯೂಸ್ ಚಾನಲ್‌ಗಳೂ ಇಂಥ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ನಾಲ್ಕೈದು ಮಂದಿ ಅತಿಥಿಗಳು, ಸುಮಾರು ಐವತ್ತು ಮಂದಿ ಪ್ರೇಕ್ಷಕರು ಇಂಥ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ಸುವರ್ಣ ನ್ಯೂಸ್‌ನಲ್ಲಿ ಮೆಗಾ ಫೈಟ್ ಎಂಬ ಹೆಸರಿನಲ್ಲಿ ಹಿಂದೆ ರಂಗನಾಥ್ ಭಾರದ್ವಾಜ್ ಈ ಕಾರ್ಯಕ್ರಮ ನಡೆಸುತ್ತಿದ್ದರು. ನಂತರ ಅದನ್ನು ಹಮೀದ್ ಪಾಳ್ಯ ಮುಂದುವರೆಸಿದರು. ಟಿವಿ೯ ವಾಹಿನಿಯಲ್ಲಿ ಇದೇ ತರಹದ ಕಾರ್ಯಕ್ರಮ ನಡೆಸುವವರು ಶಿವಪ್ರಸಾದ್.
ಸಾಧಾರಣವಾಗಿ ರಾಜಕಾರಣಕ್ಕೆ ಸಂಬಂಧಿಸಿದ ವಿಷಯಗಳನ್ನೇ ಚರ್ಚೆಗೆ ಆಯ್ದುಕೊಳ್ಳಲಾಗುತ್ತದೆ. ಇತರ ವಿಷಯಗಳ ಚರ್ಚೆಯೂ ಇರುತ್ತದೆ. ಇಲ್ಲಿ ಪ್ರೇಕ್ಷಕರು ಎಂದರೆ ಜನಸಾಮಾನ್ಯರು ಎಂದರ್ಥ. ರಾಜಕೀಯ ಪಕ್ಷಗಳ ನಿಲುವನ್ನು ಹೇಳಲು ಅತಿಥಿಗಳಾಗಿ ರಾಜಕೀಯ ನಾಯಕರೇ ಇರುತ್ತಾರೆ. ಇವರನ್ನು ಪ್ರಶ್ನಿಸುವವರು ಸಹಜವಾಗಿಯೇ ನಿರೂಪಕರು ಮತ್ತು ಜನಸಾಮಾನ್ಯ ಪ್ರೇಕ್ಷಕರು.
ಆದರೆ ಶಿವಪ್ರಸಾದರ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೇಕ್ಷಕರು ಜನಸಾಮಾನ್ಯರಲ್ಲ. ರಾಜಕೀಯ ಪಕ್ಷಗಳ ಬಾಡಿಗೆ ಬಂಟರು. ಇದು ನಮ್ಮ ಆರೋಪವಲ್ಲ. ಸ್ವತಃ ಶಿವಪ್ರಸಾದ್ ಅವರೇ ಈ ವಾರದ ಚರ್ಚೆಯಲ್ಲಿ ಬಹಿರಂಗಪಡಿಸಿದ ರಹಸ್ಯ.
ಸಾಧಾರಣವಾಗಿ ರಾಜಕೀಯ ಸಂಬಂಧಿ ಚರ್ಚೆಗಳಲ್ಲಿ ಪ್ರೇಕ್ಷಕರು ಅತಿಥಿಗಳ ಮೇಲೆ ಹರಿಹಾಯುವುದು, ಪ್ರೇಕ್ಷಕರೇ ಪರಸ್ಪರ ದೂಷಿಸಿಕೊಳ್ಳುವುದು, ಒಮ್ಮೊಮ್ಮೆ ಇದು ಹೊಡೆದಾಟದ ಹಂತಕ್ಕೂ ತಲುಪುವುದನ್ನು ನಾವು ನೋಡಿದ್ದೇವೆ. ನೀವು ಗಮನಿಸಿರಬಹುದು, ಇಂಥ ಸಂಘರ್ಷದ ಕ್ಲಿಪ್ಪಿಂಗ್‌ಗಳನ್ನೇ ಪ್ರೊಮೋಗಳಲ್ಲಿ ಬಳಸಲಾಗುತ್ತದೆ. ಅದರರ್ಥ ಚಾನಲ್‌ಗಳಿಗೆ ಇಂಥ ದೃಶ್ಯಗಳು ಬೇಕು ಮತ್ತು ಬೇಕೇಬೇಕು. ಸಾಮಾನ್ಯ ಜನರು ಬಂದು ಗದ್ದಲ ಮಾಡುತ್ತಾರೆ ಎಂದು ನಂಬುವಂತಿಲ್ಲ, ಹೀಗಾಗಿ ಅವರಿಗೆ ರಾಜಕೀಯ ಪಕ್ಷಗಳ ಪುಡಾರಿಗಳೇ ಬೇಕು.
ಬಿಜೆಪಿಯ ಧನಂಜಯ ಕುಮಾರ್, ಕಾಂಗ್ರೆಸ್‌ನ ಬಿ.ಎಲ್.ಶಂಕರ್, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್ ಮತ್ತು ಓರ್ವ ಜ್ಯೋತಿಷಿ ಭಾಗವಹಿಸಿದ್ದ ಶಿವಪ್ರಸಾದ್ ಶೋನಲ್ಲಿ ಆಣೆ-ಪ್ರಮಾಣದ ಚರ್ಚೆ ನಡೆಯುತ್ತಿತ್ತು. ಬಿಜೆಪಿಯವರು ಮಾಡಿದ ಎಂಥದ್ದೇ ಪಾಪವನ್ನಾದರೂ ಸರಿ ಅದನ್ನು ಸಮರ್ಥಿಸಿಕೊಳ್ಳಲು ಸದಾ ತುದಿಗಾಲಲ್ಲಿ ನಿಲ್ಲುವ ಧನಂಜಯ ಕುಮಾರ್ ಯಾಕೋ ಅಪ್ ಸೆಟ್ ಆದಂತಿತ್ತು. ಪ್ರೇಕ್ಷಕರ ಕಡೆಯಿಂದ ಕೇಳಿಬಂದ ಮಾತುಗಳಿಗೆ ಅವರು ರಾಂಗ್ ಆಗಿ, ನಾಲಿಗೆ ಬಿಗಿ ಹಿಡಿದು ಮಾತನಾಡ್ರೀ ಎಂದು ಕಿರುಚುತ್ತಿದ್ದರು.
ಆದರೂ ಪ್ರೇಕ್ಷಕರ ಮಾತಿನ ಕೂರಂಬು ತಿವಿಯತೊಡಗಿದಾಗ ಹತಾಶರಾದ ಧನಂಜಯ ಕುಮಾರ್, ಅಲ್ರೀ ಶಿವಪ್ರಸಾದ್ ಹೀಗೆ ಒಂದೇ ಮಾಬ್ ತಂದು ಕೂರಿಸುವುದು ಸರಿನಾ? ಎಂದು ಪ್ರಶ್ನಿಸಿದರು.
ಶಿವಪ್ರಸಾದ್ ಈ ಆರೋಪವನ್ನು ಸೀರಿಯಸ್ಸಾಗಿ ತೆಗೆದುಕೊಂಡೇಬಿಟ್ಟರು. ನೋಡಿ ಸ್ವಾಮಿ, ನಿಮ್ಮ ಪಕ್ಷದ ಪಿಆರ್‌ಓ ಇದ್ದಾರಲ್ಲ, ಶಿವಾನಂದ್ ಅಂತ ಅವರಿಗೆ ಹತ್ತು ಸರ್ತಿ ಫೋನ್ ಮಾಡಿದೆವು. ಏನು ಕೆಲಸ ಮಾಡ್ತಾರೋ ಏನೋ ಅವರು. ಉತ್ತರ ಕೊಡಲಿಲ್ಲ. ಕಡೆಗೆ ನಾನೇ ಒಂದು ಎಸ್‌ಎಂಎಸ್ ಮಾಡಿದೆ. ನೀವು ನಮ್ಮ ಕರೆಗೆ ಉತ್ತರಿಸುತ್ತಿಲ್ಲ. ನೀವು ಕಳುಹಿಸುವ ಜನ ಇಲ್ಲದೆಯೇ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ. ಟಿವಿ೯ ಜತೆಗೆ ನಿಮ್ಮ ಅಸಹಕಾರಕ್ಕೆ ಧನ್ಯವಾದಗಳು ಅಂತ ಎನ್ನುತ್ತ ತಮ್ಮ ಮೊಬೈಲ್ ಹೊರತೆಗೆದು ಸೆಂಟ್ ಮೆಸೇಜ್ ತೋರಿಸಿಯೇ ಬಿಟ್ಟರು.
ಅಲ್ಲಿಗೆ ಶಿವಪ್ರಸಾದ್ ಅವರ ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರನ್ನು ಕಳುಹಿಸುವ ಹೊಣೆ ರಾಜಕೀಯ ಪಕ್ಷಗಳಿಗೇ ಸೇರಿದ್ದು ಎಂದಾಯಿತು. ಇವತ್ತಿನ ಕಾರ್ಯಕ್ರಮಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಪಿಆರ್‌ಓಗಳು ಮಾತ್ರ ತಮ್ಮ ಬಂಟರನ್ನು ಕಳುಹಿಸಿರಬಹುದು. ಹೀಗಾಗಿಯೇ ಧನಂಜಯ ಕುಮಾರ್ ಅಪ್‌ಸೆಟ್ ಆಗಿದ್ದಿರಬಹುದು.
ಹಾಗಿದ್ದ ಮೇಲೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಬಾಡಿಗೆ ಬಂಟರನ್ನು ಸಾಮಾನ್ಯ ಪ್ರೇಕ್ಷಕರು ಎಂಬಂತೆ ಬಿಂಬಿಸುವುದು ಏಕೆ? ಸಭಿಕರ ಆಸನಗಳನ್ನು ಮೂರು ವಿಭಾಗ ಮಾಡಿ, ಮೂರು ರಾಜಕೀಯ ಪಕ್ಷಗಳಿಗೆ ಹಂಚಿ, ಪ್ರತಿ ಭಾಗದಲ್ಲೂ ಆಯಾ ರಾಜಕೀಯ ಪಕ್ಷದ ಬಾವುಟ ನೆಟ್ಟು ಕಾರ್ಯಕ್ರಮ ನಡೆಸಬಹುದಲ್ಲ?
ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವ ರಾಜಕೀಯ ಪಕ್ಷದ ಕಾರ್ಯಕರ್ತರೂ ಅಲ್ಲದ ಸಾಮಾನ್ಯ ಜನರು ಭಾಗವಹಿಸಲು ಯಾಕೆ ಅವಕಾಶ ನೀಡುವುದಿಲ್ಲ? ಅಥವಾ ಇದೇ ಪ್ರಶ್ನೆಯನ್ನು ಇನ್ನೊಂದು ರೂಪದಲ್ಲಿ ಕೇಳುವುದಾದರೆ ರಾಜಕೀಯ ಪಕ್ಷಗಳ ನಿಲುವು ಹೇಳಲು ರಾಜಕಾರಣಿಗಳೇ ಅತಿಥಿಗಳಾಗಿರುವಾಗ ಪ್ರೇಕ್ಷಕರ ರೂಪದಲ್ಲಿ ರಾಜಕಾರಣಿಗಳ ಭಕ್ತರು, ಪುಡಿಗಳೇ ಬೇಕೆ?
ಎಲ್ಲರೂ ಬೇರೆ ಬೇರೆ ರಾಜಕೀಯ ಪಕ್ಷಗಳ ಹಿಂಬಾಲಕರೇ ಆಗಿರುವಾಗ ನೀವು ನಡೆಸುವ ಚರ್ಚೆ ವಸ್ತುನಿಷ್ಠವಾಗಿರಲು ಹೇಗೆ ಸಾಧ್ಯ? ಜನಸಾಮಾನ್ಯರ ಮಾತುಗಳನ್ನು ಆಡುವವರು ಯಾರು? ಅದು ಬೇಡ ಅನ್ನುವುದಾದರೆ ಇಂಥ ಚರ್ಚೆ ನಡೆಸುವ ಅಗತ್ಯವಾದರೂ ಏನು? ಅದನ್ನು ಬಡಪಾಯಿ ಪ್ರೇಕ್ಷಕರ ಮೇಲೆ ಹೇರುವುದಾದರೂ ಯಾಕೆ?
ಶಿವಪ್ರಸಾದ್ ಏನೇ ಕಾರ್ಯಕ್ರಮ ಮಾಡಿದರೂ ಹೋಮ್ ವರ್ಕ್ ಮಾಡಿಯೇ ಮಾಡುತ್ತಾರೆ. ಶ್ರದ್ಧೆ ಮತ್ತು ಶ್ರಮ ಎರಡನ್ನೂ ವಿನಿಯೋಗಿಸುವುದು ಕಣ್ಣಿಗೆ ಕಾಣುತ್ತದೆ. ಆದರೆ ತಮ್ಮ ಕಾರ್ಯಕ್ರಮಕ್ಕೆ ರಾಜಕೀಯ ಪಕ್ಷಗಳ ಬಂಟರನ್ನು ಕರೆಸಿ ಪ್ರೇಕ್ಷಕರನ್ನಾಗಿಸುವ ಅನಿವಾರ್ಯತೆ ಏನು ಎಂಬುದಕ್ಕೆ ಅವರೇ ಉತ್ತರಿಸಬೇಕು.
ಇವತ್ತಿನ ಎಪಿಸೋಡ್ ನೋಡಿದ ಮೇಲೆ ಇಂಥ ಕಾರ್ಯಕ್ರಮಗಳ ನಿರ್ಮಾಪಕರ ಮೇಲೆ ಸಿಟ್ಟೂ ಬರುತ್ತಿಲ್ಲ, ಬೇಸರವೂ ಆಗುತ್ತಿಲ್ಲ, ಕನಿಕರವಾಗುತ್ತಿದೆ.

发表评论