ಐಶ್ವರ‍್ಯ ರೈ ಬಚ್ಚನ್ ಹೊಟ್ಟೆಯಲ್ಲಿ ಇನ್ನೂ ಹುಟ್ಟದ ಮಗುವಿಗೆ ಸಿಕ್ಕ ಪ್ರಚಾರ ಕೆಜಿಎಫ್‌ನಲ್ಲಿ ಮಲ ಹೊತ್ತು ನೂರಾರು ಖಾಯಿಲೆಗಳಿಂದ ಸತ್ತು ಹೋಗುತ್ತಿರುವ ಜನರಿಗೆ ಸಿಗುವುದಿಲ್ಲ. ಇದು ಕಠೋರ ವಾಸ್ತವ. ನಿನ್ನೆ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಾವು ಹೇಳಿದಂತೆಯೇ ಕೆಜಿಎಫ್ ನಗರಕ್ಕೆ ಭೇಟಿ ನೀಡಿದ್ದಾರೆ. ಮಲ ಹೊರುವಿಕೆಗೆ ನಿಷೇಧವಿದ್ದರೂ ಆ ಕಾರ್ಯ ಮಾಡುತ್ತಿರುವವರನ್ನು ಅವರು ಕಣ್ಣಾರೆ ಕಂಡಿದ್ದಾರೆ. ಅವರಿಗೆ ಪುನರ್ವಸತಿಯ ಭರವಸೆಯನ್ನೂ ನೀಡಿದ್ದಾರೆ. ಕ್ರಮ ಕೈಗೊಳ್ಳದ ಅಧಿಕಾರಿಗಳನ್ನೂ ಗದರಿದ್ದಾರೆ. ತಮಾಶೆಯೆಂದರೆ ಸಚಿವರು ಭೇಟಿ ನೀಡುವವರೆಗೆ ಇಲ್ಲಿ ಮಲ ಹೊರುವವರು ಇದ್ದಾರೆ ಎಂಬುದೇ ಜಿಲ್ಲಾಧಿಕಾರಿಗಳಿಗೆ ಗೊತ್ತಿರಲಿಲ್ಲವಂತೆ.

ವಿಶೇಷವೆಂದರೆ ಕೆಜಿಎಫ್‌ಗೆ ಸಚಿವರು ನೀಡಿರುವ ಭೇಟಿ ಪತ್ರಿಕೆಗಳ ಬೆಂಗಳೂರು ಆವೃತ್ತಿಗಳಲ್ಲಿ ಪ್ರಕಟವಾಗೇ ಇಲ್ಲ. ಅದು ಅಷ್ಟು ಮಹತ್ವದ ಸುದ್ದಿ ಎಂದು ಪತ್ರಿಕಾ ಪ್ರಪಂಚಕ್ಕೆ ಅನ್ನಿಸಿರಬಹುದು. ರಾಜಕಾರಣಿಗಳ ಪತ್ರಿಕಾ ಓದುಗರಿಗೆ ಆಣೆ-ಪ್ರಮಾಣದ ಸುದ್ದಿಗಳನ್ನು ಓದುವಷ್ಟು ಆಸಕ್ತಿ ಮಲ ಹೊರುವವರ ಕುರಿತಾದ ಸುದ್ದಿಯ ಬಗ್ಗೆ ಇಲ್ಲದೇ ಇರಬಹುದು, ಇರಲಿ ಬಿಡಿ.

ಟೈಮ್ಸ್ ಆಫ್ ಇಂಡಿಯಾ ಮಾತ್ರ ಈ ಸುದ್ದಿಗೆ ವಿಶೇಷ ಆದ್ಯತೆ ನೀಡಿ, ಮುಖಪುಟದಲ್ಲೇ ವರದಿ ಪ್ರಕಟಿಸಿದೆ. ಟೈಮ್ಸ್ ಆಫ್ ಇಂಡಿಯಾz ವರದಿಯನ್ನು ಓದಲು ಈ ಲಿಂಕನ್ನು ಬಳಸಿ. ಕನ್ನಡಪ್ರಭದ ಸ್ಥಳೀಯ ಆವೃತ್ತಿಯಲ್ಲಿ ಪ್ರಕಟಗೊಂಡ ವರದಿಯನ್ನು ಓದಲು ಈ ಲಿಂಕನ್ನು ಬಳಸಿ.
0 komentar

Blog Archive