
ಇವತ್ತು ನ್ಯೂಸ್ ಚಾನಲ್‌ಗಳಲ್ಲಿ ನಿರೂಪಕಿಯರು ಮಾತ್ರವಲ್ಲ, ವರದಿಗಾರರು ಹಾಗು ಇತರ ತಾಂತ್ರಿಕ ಆಯ್ಕೆಗಳಲ್ಲೂ ಮಹಿಳೆಯರು ಮುಂದಿದ್ದಾರೆ. ಈ ಟ್ರೆಂಡ್ ಹೀಗೆ ಮುಂದುವರೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಅದು ಹಾಗೇ ಮುಂದುವರೆಯಲಿ ಎಂದು ಹಾರೈಸೋಣ.
ಹಾಗೆ ಸುಮ್ಮನೆ ಟಿವಿ ನಿರೂಪಕಿಯರ ಕುರಿತು ಒಂದು ಟಿಪ್ಪಣಿ ಇಲ್ಲಿ ಒದಗಿಸಿದ್ದೇವೆ. ಇವರ ಪೈಕಿ ಯಾರು ಹೆಚ್ಚು ಇಷ್ಟವಾಗುತ್ತಾರೆ, ದಯವಿಟ್ಟು ಹೇಳಿ. ನೀವು ಇಷ್ಟಪಡುವ ನಿರೂಪಕಿ ಈ ಪಟ್ಟಿಯಲ್ಲಿಲ್ಲದಿದ್ದರೂ ಪರವಾಗಿಲ್ಲ ಅವರ ವಿಶೇಷತೆ ಕುರಿತು ಬರೆದು ಹೇಳಿ.
ಟಿವಿ ೯
ಉಷಾ: ಸ್ಪಷ್ಟ ಭಾಷೆ, ಗಂಭೀರ ಮುಖಭಾವ, ಹೇಳುವುದನ್ನು ಅತ್ಯಂತ ನಿಚ್ಚಳವಾಗಿ ತಿಳಿಸುತ್ತಾರೆ. ತೊದಲುವ ಮಾತೇ ಇಲ್ಲ. ಅಗತ್ಯ ಇರುವ ಕಡೆ ನಗುವನ್ನು ಚೆಲ್ಲುತ್ತಾರೆ.
ಶೀತಲ್: ತುಂಟತನದ ಛಾಯೆ. ಖುಷಿ ಕೊಡುವ ಆತ್ಮವಿಶ್ವಾಸ. ಅಕಸ್ಮಾತ್ ತಪ್ಪು ಆದರೂ ತಿದ್ದಿಕೊಳ್ಳುವ ಸಮಯಸ್ಪೂರ್ತಿ. ಕಣ್ಣು ಮಿಟುಕಿಸಿ ಮಾತಾಡುವುದು ವಿಶೇಷತೆ.
ಸಮೀನ: ಶುದ್ಧ ಕನ್ನಡ, ಸ್ಪಷ್ಟ ಉಚ್ಛಾರ. ಯಾವ ಕಾರ್ಯಕ್ರಮ ಕೊಟ್ಟರೂ ನಿರರ್ಗಳವಾಗಿ ಮಾತಾಡುವ ಸ್ಥೈರ್ಯ.
ರಾಧಿಕ: ಗಂಭೀರತೆಯೇ ಪ್ಲಸ್ ಪಾಯಿಂಟ್. ಸುಂದರವಾಗಿ ನಕ್ಕು ಇಡೀ ಪರಿಸರವನ್ನು ಆಹ್ಲಾದಕರಗೊಳಿಸುವ ಕಲೆಗಾರಿಕೆ ಇದೆ. ಮಾತಿನ ಶೈಲಿ ಚಂದ. ವಿಷಯ ಮಂಡನೆಯು ಸಹ ಜನರನ್ನು-ಅತಿಥಿಗಳನ್ನು ಆಕರ್ಷಿಸುತ್ತದೆ.
ಸುವರ್ಣ ನ್ಯೂಸ್
ಸುಕನ್ಯ: ಮೃದುವಾದ ಭಾಷೆ, ಆಪ್ತವೆನ್ನಿಸುವ ಶೈಲಿ. ತಪ್ಪು ಹುಡುಕುವ ಪ್ರಯತ್ನ ಮಾಡಿದರೂ ಸಿಕ್ಕಲ್ಲ. ಎಲ್ಲಾ ವಿಷಯಗಳಿಗೂ ಫಿಟ್ ಅಂಡ್ ಪರ್ಫೆಕ್ಟ್
ಭಾವನ: ಮಾತು ಪರವಾಗಿಲ್ಲ. ಧ್ವನಿ ಕೇಳಲು ಆರಾಮ. ಕೊಟ್ಟ ಕೆಲಸ ನೀಟಾಗಿ ಮಾಡುವ ಉತ್ಸಾಹ ಇದೆ. ಅತಿ ಅನ್ನಿಸದ ವರ್ತನೆ
ರಾಧ ಹಿರೇಗೌಡರ್: ಕ್ರೈಂ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ಶೈಲಿ . ಅದಕ್ಕೆ ಬೇಕಾದ ಖಡಕ್ ಶೈಲಿ ಆಕೆಯಲ್ಲಿದೆ. ಇದು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತ್ತದೆ. ಇತ್ತೀಚಿಗೆ ಕ್ರಿಕೆಟ್‌ಗೂ ಸೈ ಎನಿಸಿಕೊಂಡಿದ್ದಾರೆ.
ಶ್ವೇತ: ಚಂದದ ಭಾಷೆ. ಸ್ವಲ್ಪ ಮೂಗಿನಲ್ಲಿ ಮಾಡ್ತಾರೆ ಎಂದು ಅನ್ನಿಸಿದ್ರೂ ಭಾಷೆಯನ್ನೂ ಆರಾಮವಾಗಿ ಬಳಸಿಕೊಳ್ತಾರೆ. ಜನರನ್ನು ಆಕರ್ಷಿಸಲು ಅಗತ್ಯವಾದ ಆಂಗಿಕ ಶೈಲಿ ಇದೆ.
ಉದಯ
ಅನುಪಮ: ಮುದ್ದು ಮುದ್ದಾಗಿ ನಗ್ತಾ ಮಾತಾಡ್ತಾರೆ. ಆ ನಗು ಆಕೆಯ ಮೊದಲ ಪ್ಲಸ್ ಪಾಯಿಂಟ್. ಭಾಷೆಯ ಬಳಕೆಯಲ್ಲೂ ಪಳಗಿದ್ದಾರೆ. ಎಲ್ಲಿ ಪಾಸ್ ಕೊಡಬೇಕು, ಕೊಡಬಾರದು ಎನ್ನುವ ಸಾಮಾನ್ಯ ಜ್ಞಾನ ಆಕೆಗಿದೆ. ಸಂದರ್ಶನದಲ್ಲಿ ಯಾವ ರೀತಿ ಅತಿಥಿಗಳ ಜೊತೆ ಹರಟಬೇಕು ಎಂದು ತಿಳಿದಿದೆ.
ಹೇಮಲತಾ: ಕೊಟ್ಟ ಕಾರ್ಯಕ್ರಮ ಯಾವುದೇ ಆಗಿದ್ದರೂ ನಿಭಾಯಿಸುವ ಚಾಕಚಕ್ಯತೆ ಈಕೆಗಿದೆ. ಜನರನ್ನು ಯಾವ ರೀತಿ ಆಕರ್ಷಿಸಬೇಕು ಎನ್ನುವ ಬಗ್ಗೆ ಚೆನ್ನಾಗಿ ತಿಳಿದಿದೆ. ಮಾತು ಬೋರ್ ಹೊಡಿಸಲ್ಲ. ಎಳೆಯುವ ಸ್ವಭಾವ ಇಲ್ಲ.
ಕಸ್ತೂರಿ
ಲಕ್ಷ್ಮಿ ಮನಮೋಹನ್: ಒಬ್ಬ ನಿರೂಪಕಿಗೆ ಇರಬೇಕಾದ ಎಲ್ಲಾ ಪ್ಲಸ್ ಪಾಯಿಂಟ್‌ಗಳು ಈಕೆಗಿದೆ . ಭಾಷೆ, ಭಾವ, ನಗು, ಡ್ರಸ್ ಸೆನ್ಸ್, ಸಭ್ಯತೆ , ವೀಕ್ಷಕರನ್ನು ಆಕರ್ಷಿಸುವ ರೀತಿ...
ಸಮಯ
ಮಂಜುಳ: ಮಾತಿನ ಶೈಲಿ ಇಷ್ಟವಾಗುತ್ತದೆ. ಆಂಗಿಕ ವರ್ತನೆ ಬೋರ್ ಹೊಡಿಸಲ್ಲ. ನಸುನಗುತ್ತಾ ಮಾತನಾಡುವ ರೀತಿ ಸಹ ಇಷ್ಟ ಆಗುತ್ತೆ.
ಈಟೀವಿ ಕನ್ನಡ
ಅನು ಪ್ರಭಾಕರ್: ಅತಿಥಿಗಳು ಹೇಳುವುದನ್ನು ಕೇಳುವ ಸಹನೆ ಇದೆ. ಹೆಚ್ಚು ಸ್ಟೈಲಿಶ್. ಮಾತು ಹಾಗೂ ಉಡುಪು ಸಹ ಆಕರ್ಷಕ. ತನ್ನ ಮುಕ್ತ ನಗುವಿನಿಂದ ವೀಕ್ಷಕರನ್ನು ಹಿಡಿದಿಟ್ಟು ಕೊಳ್ಳುವ ಕಲೆ ಗೊತ್ತಿದೆ.
ಜೀ ಕನ್ನಡ
ಮಾಳವಿಕ ಅವಿನಾಶ್: ಮಾತು ಸ್ಪಷ್ಟ. ಹೇಳುವುದನ್ನು ಅಚ್ಚುಕಟ್ಟಾಗಿ ತಿಳಿಸಿ ಬಿಡುವ ರೀತಿ. ಮಾತಿನ ಶೈಲಿ ಚಂದ
ಜನಶ್ರೀ
ಸಾಹಿತ್ಯ: ಸುಂದರ ಮೋಹಕ ನಗೆ. ಮಾತು ಚಂದ. ವೀಕ್ಷಕರು ಆಕರ್ಷಿತರಾಗುವುದಕ್ಕೆ ಅಗತ್ಯ ಇರುವ ಗಂಭೀರವಾದ ಮಾತಿನ ಶೈಲಿ ಗಮನ ಸೆಳೆಯುತ್ತದೆ. ಪ್ರತಿಭಾವಂತೆ.
ಸುಗುಣ: ವೀಕ್ಷಕರನ್ನು ಹಿಡಿಟ್ಟುಕೊಳ್ಳುವ ಧ್ವನಿ. ವಾಯ್ಸ್ ಮಾಡ್ಯುಲೇಶನ್ ತುಂಬಾ ಚೆನ್ನಾಗಿ ಗೊತ್ತಿದೆ. ಮಾತು ಸ್ಪಷ್ಟ ಸುಂದರ. ಪರದೆಯ ಹಿಂದೆಯೂ ಮಾತಾಡುತ್ತಾರೆ, ಹಿಂದೆಯೂ ಮಾತಾಡುತ್ತಾರೆ. ಎರಡಕ್ಕೂ ಸೈ.
ಇವರುಗಳು ಹೆಚ್ಚು ಜನರ ಗಮನ ಸೆಳೆದವರು. ನೀವೇನಂತೀರಿ? ಈ ಬಾರಿ ಪೋಲ್ ಮಾಡುತ್ತಿಲ್ಲ. ಹಾಗೇ ಕಮೆಂಟ್ ಹಾಕಿ. ನಾವು ಉಲ್ಲೇಖಿಸದವರ ಕುರಿತೂ ದಯಮಾಡಿ ಗಮನಕ್ಕೆ ತನ್ನಿ.
发表评论