ವಿಶ್ವೇಶ್ವರ ಭಟ್ಟರ ವೆಬ್‌ಸೈಟು ತಾತ್ಕಾಲಿಕವಾಗಿ ಬಂದ್ ಆಗಿದೆ. ಹೀಗಾಗಿ ಸಂಪಾದಕೀಯದ ಹಿಂದಿನ ಪೋಸ್ಟ್‌ನಲ್ಲಿ ಒದಗಿಸಲಾದ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಿಮಗೆ ನ್ಯೂ ವೆಬ್‌ಸೈಟ್ ಕಮಿಂಗ್ ಸೂನ್ ಎಂಬ ವಾಕ್ಯವಿರುವ ಪರದೆ ತೆರೆದುಕೊಳ್ಳುತ್ತದೆ. ಹೀಗಾಗಿ ಸದ್ಯಕ್ಕೆ ಆ ಲಿಂಕ್‌ಗೆ ಹೋಗುವುದು ಬೇಡ.

ಭಟ್ಟರ ಸೈಟಿನಲ್ಲಿದ್ದ ಸಿಹಿಸುದ್ದಿಯ ಸಮಾಚಾರವನ್ನು ಸಂಪಾದಕೀಯ ಪ್ರಕಟಿಸುತ್ತಿದ್ದಂತೆ ನೂರಾರು ಮಂದಿ ಬಂದುಹೋಗಿದ್ದಾರೆ. ಸಂಜೆ ಹೊತ್ತಿಗೆ ಎಲ್ಲರಿಗೂ ಉತ್ತರಿಸಿ ಸಾಕಾಗಿ ಹೋದ ಭಟ್ಟರು ವೆಬ್‌ಸೈಟ್ ತಾತ್ಕಾಲಿಕ ನಿಲುಗಡೆಗೆ ನಿರ್ಧರಿಸಿದ್ದಾರೆ ಎಂಬುದು ರಾಜರಾಜೇಶ್ವರಿ ನಗರದ ಕಡೆಯಿಂದ ಗೊತ್ತಾಗಿರುವ ಸುದ್ದಿ.

ಆದರೆ ಭಟ್ಟರ ಪ್ರಕಾರ ಅವರ ಹೊಸ ವೆಬ್‌ಸೈಟು ಇನ್ನೂ ಲಾಂಚ್ ಆಗೇ ಇಲ್ಲ. ಸದ್ಯದಲ್ಲೇ ಅದನ್ನು ಲಾಂಚ್ ಮಾಡುತ್ತೇನೆ ಎಂದು ಅವರು ತಮ್ಮ ಫೇಸ್‌ಬುಕ್ ಅಭಿಮಾನಿಗಳಿಗೆ ಅಭಯವಿತ್ತಿದ್ದಾರೆ.

ಭಟ್ಟರು ಫೇಸ್‌ಬುಕ್‌ನಲ್ಲಿ ಬರೆದಿರುವುದು ಹೀಗೆ:

Vishweshwar Bhat

Vishweshwar Bhat Dear Friends,

Please bear with me for couple of days. I am busy with my future project. I had to leave for Delhi on an urgent work. Hence the delay in launching my website. I am sure, you will understand me and wait for my website. I will not disappoint you.

My best
...

See More
12 hours ago ·  · 
ಆದರೆ ಅವರ ಮುಗ್ಧ ಅಭಿಮಾನಿಗಳು ವೆಬ್‌ಸೈಟ್ ಚೆನ್ನಾಗಿದೆ, ನೋಡಿದ್ದೇವೆ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ಭಟ್ಟರಿಗೆ ವೈಯಕ್ತಿಕ ಬ್ಲಾಗ್, ವೆಬ್‌ಸೈಟ್ ಎಂದರೆ ಅಷ್ಟಕ್ಕಷ್ಟೆ ಅನ್ನುವ ಮಾತಿದೆ. ಹಿಂದೆ ಭಟ್ಟರು ಬ್ಲಾಗ್‌ಗಳ ಕುರಿತು ಹೊಂದಿರುವ ಅಭಿಪ್ರಾಯದ ಕುರಿತು  ರವಿ ಬೆಳಗೆರೆ ಬರೆದಿದ್ದರು. ಅದರ ಪ್ರಕಾರ ಬ್ಲಾಗರ್‌ಗಳೆಂದರೆ ಒಂಟಿಕೋಣೆಯಲ್ಲಿ ಬಾಗಿಲು ಮುಚ್ಚಿಕೊಂಡು ಕುಳಿತು ದುರ್ವಾಸನೆ ಬಿಟ್ಟು ಅದನ್ನೇ ಆಸ್ವಾದಿಸುವವರು. ಹಾಗೆ ನೋಡಿದರೆ ಬ್ಲಾಗ್‌ಗೂ, ವೈಯಕ್ತಿಕ ವೆಬ್‌ಸೈಟಿಗೂ ಅಂಥ ವ್ಯತ್ಯಾಸಗಳೇನು ಇಲ್ಲ.


ಭಟ್ಟರು ನಿಜಕ್ಕೂ ಹಾಗೆ ಹೇಳಿದ್ದರಾ?  ಹೇಳಿದ್ದರೆ ಮತ್ತೇಕೆ ಅವರು ಕೋಣೆ ಸೇರಿಕೊಂಡು ದುರ್ವಾವಸೆ ಬಿಟ್ಟು ಆಸ್ವಾದಿಸಲು ಹೊರಟಿದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಭಟ್ಟರು ಹಾಗೆ ಹೇಳಿರದೇ ಇರಲಿ ಎಂಬುದು ಅವರ ಅಸಂಖ್ಯಾತ ಅಭಿಮಾನಿ ಬ್ಲಾಗರ್‌ಗಳ ಆಶಯ.

ಇನ್ನು ಅನೌನ್ಸ್‌ಮೆಂಟ್‌ನ ಕುರಿತಾಗಿ ಹೇಳುವುದಾದರೆ, ವಿಶ್ವೇಶ್ವರ ಭಟ್ಟರ ವೆಬ್‌ಸೈಟು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವವರು ಭಾವಿ ಪತ್ರಿಕೆಯ ಹಾಲಿ ಹಿರಿಯ ಉಪಸಂಪಾದಕರು ಎಂಬ ಮಾತಿದೆ. ನಾಲ್ಕು ಸಾಲಿನ ಒಂದು ಪ್ಯಾರಾದಲ್ಲಿ ಒಂದೇ ವಾಕ್ಯವನ್ನು ಎರಡು ಬಾರಿ ಬರೆಯುವಷ್ಟು ಭಟ್ಟರು ದಡ್ಡರಲ್ಲ ಎಂಬುದು ಬಲ್ಲವರ ಅಭಿಮತ. ಭಟ್ಟರಿಗೆ ಗೊತ್ತಿಲ್ಲದಂತೆ ಈ ಅನೌನ್ಸ್‌ಮೆಂಟ್ ಹೊರಬಿದ್ದಿರಲೂಬಹುದು. ಭಟ್ಟರಿಗೆ ಹೊಸ ಪತ್ರಿಕೆ ಆರಂಭಿಸುವ ತುರ್ತು ಎಷ್ಟಿದೆಯೋ ಅದಕ್ಕಿಂತ ಹೆಚ್ಚು ತುರ್ತು ಅವರ ಜತೆ ಕೆಲಸ ಬಿಟ್ಟವರಿಗಿದೆ. ಅದರಲ್ಲೂ ಭಟ್ಟರ ಹೊರತಾಗಿ ಇನ್ನ್ಯಾವ ಸಂಪಾದಕನ ಕೈ ಕೆಳಗೂ ಕೆಲಸ ಮಾಡಲಾರೆ ಎಂದು ಧರ್ಮಸ್ಥಳದ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಿರುವವರು ಕೈ ಬಾಯಿ ಎಲ್ಲವೂ ಕಡಿಯುತ್ತಿದೆ. ಯಾವಾಗ ಶುರು ಮಾಡ್ತೀವೋ, ಯಾವಾಗ ನಮ್ಮ ಶತ್ರುಗಳ ಮೇಲೆ ಬೀಳ್ತೀವೋ, ಯಾವಾಗ ರವಿ ಬೆಳಗೆರೆ ಮುಂತಾದವರನ್ನು ಹಣಿಯುತ್ತೇವೋ ಎಂದು ಅವರು ಹಲ್ಲುಹಲ್ಲು ಕಡಿಯುತ್ತಿದ್ದಾರೆ. ಅತ್ಯುತ್ಸಾಹಿಗಳ ಪ್ರತಾಪದಿಂದಾಗಿ ವೆಬ್‌ಸೈಟು ಆರಂಭವಾಗಿ, ಸದ್ಯಕ್ಕೆ ಬಾಗಿಲು ಮುಚ್ಚಿಕೊಂಡು ರೀಲಾಂಚ್ ಆಗುವ ಸಂದೇಶ ಹೊದ್ದು ಮಲಗಿದೆ.

ಭಟ್ಟರು ದಿಲ್ಲಿಗೆ ಅರ್ಜೆಂಟಾಗಿ ಹೋಗಬೇಕಿದೆಯಂತೆ. ದಿಲ್ಲಿಯಲ್ಲಿ ಈಗ ವಿಪರೀತ ಚಳಿ. ಒಂದೆರಡು ಸ್ವೆಟರು, ಜರ್ಕಿನ್ ಹೆಚ್ಚೇ ತೆಗೆದುಕೊಂಡು ಹೋಗಲಿ ಎಂಬುದು ಸಂಪಾದಕೀಯದ ಸಲಹೆ.
READ MORE - ವಿಶ್ವೇಶ್ವರ ಭಟ್ಟರ ಸೈಟು ಏನಾಗಿ ಹೋಯ್ತು?
On Saturday, January 1, 2011 at 6:56 PM, 12 Companies of Los Angeles Firefighters, 3 LAFD Rescue Ambulances, 1 Urban Search and Rescue Unit, 1 Hazardous Materials Team, 2 EMS Battalion Captains, 4 Battalion Chief Officer Command Teams and 1 Division Chief Officer Command Team, a total of 86 Los Angeles Fire Department personnel under the direction of Battalion Chief Kevin Pearson, responded to a Greater Alarm Structure Fire at 8765 South McKinley Avenue in Watts.

Los Angeles Firefighters arrived quickly to find heavy fire to the rear of and threatening a 25' x 100' residential duplex under construction.

The swift moving flames had consumed a van parked within an attached garage and heavily damaged that structure, before spreading to the unoccupied duplex, which was framed internally with dimensional lumber and externally wrapped in preparation for siding or stucco.

Despite a well coordinated attack that brought flames under control in just 23 minutes, the partially-constructed duplex, as well as the van and garage were destroyed by fire.

There were no injuries reported.

Loss to the van, garage and unoccupied duplex is estimated at $150,000. The fire was determined to be a deliberate act, and remains under active investigation by the LAFD Arson/Counter-Terrorism Section.


Submitted by Brian Humphrey, Spokesman
Los Angeles Fire Department
READ MORE - Watts Fire Destroys Van, Garage & Duplex Under Construction
On Saturday, January 1, 2011 at 12:49 PM, 4 Companies of Los Angeles Firefighters, 2 LAFD Rescue Ambulances, 1 EMS Battalion Captain and 2 Battalion Chief Officer Command Teams, a total of 29 Los Angeles Fire Department personnel under the direction of Battalion Chief Chris Kawai, responded to a Structure Fire at 19927 Arminta Street in Winnetka.

Responding to initial reports of a rubbish fire, neighborhood firefighters arrived quickly to find flames from a large trash can had extended to the attic of a one-story single family home.

Firefighters swiftly extended ground ladders to the roof of the 1500 square foot residence to perform strategic vertical ventilation with chainsaws, as their colleagues deployed hoselines within the building to halt the spread of flame.

The combined effort of LAFD personnel within and above the structure quickly stemmed the downward and lateral advance of flame, confining the fire to the attic. Simultaneous and well-coordinated efforts to protect and salvage personal belongings further limited the impact of the fast-moving blaze, which was extinguished in just 19 minutes.

No injuries were reported.

The need to secure the home's utilities rendered the building temporarily untenable. The man, woman and teenage male residents stated a desire to seek their own accommodations.

Loss from the fire was limited to $70,000 ($50,000 structure & $20,000 contents). The cause of this rapidly spreading blaze was determined to be accidental, and is attributed to the improper disposal of fireplace ashes.

Los Angeles Firefighters emphasize that fireplace ashes must always be handled with care. After cooling thoroughly in the fireplace, ashes should be placed directly into a metal can and soaked completely with water. No other items should be placed in the can. The metal can must be immediately covered with its own tight-fitting non-combustible lid. The closed container should then be stored at a safe outdoor location away from any structure or combustible items.

(photos)

Submitted by Brian Humphrey, Spokesman
Los Angeles Fire Department
READ MORE - Improperly Discarded Fireplace Ashes Cause $70K Damage to Winnetka Home
ಶೀಘ್ರದಲ್ಲೇ ನಿಮಗೆ ಸಿಗಲಿದೆ ಸಿಹಿ ಸುದ್ದಿ.. ಏನಿರಬಹುದೆಂಬ ಕುತೂಹಲ ನಿಮ್ಮಲ್ಲಿರಬಹುದು. ಕೆಲವೇ ಕೆಲವು ದಿನಗಳಲ್ಲಿ ನಿಮಗೊಂದು ಸಿಹಿ ಸುದ್ದಿ ಸಿಗಲಿದೆ. ಅಲ್ಲಿಯ ತನಕ ನಿರೀಕ್ಷೆಯಲ್ಲಿರುತ್ತೀರಾ ತಾನೆ?

ಹೀಗಂತ ತಮ್ಮ ಅಭಿಮಾನಿ ಸಮೂಹವನ್ನು ತುದಿಗಾಲಲ್ಲಿ ನಿಲ್ಲಿಸಿರೋರು ವಿಜಯ ಕರ್ನಾಟಕದ ಮಾಜಿ ಸಂಪಾದಕ ವಿಶ್ವೇಶ್ವರಭಟ್ಟರು.

ವಿಜಯ ಕರ್ನಾಟಕದಿಂದ ಹೊರಬಂದಾಗ ಅವರೊಂದು ಸಂದೇಶ ಕೊಟ್ಟಿದ್ದರು. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸ ಹೋಗ್ತಾ ಇದ್ದೇನೆ ಎಂದು ಹೇಳಿಕೊಂಡಿದ್ದರು.

ಈಗ ಅವರು ತಮ್ಮ ವೆಬ್‌ಸೈಟ್‌ನ ಮೂಲಕ ಹೇಳಲು ಹೊರಟಿರುವ ಸಿಹಿಸುದ್ದಿಗೂ ವಿದೇಶ ಪ್ರವಾಸಕ್ಕೂ ಏನೇನೂ ಸಂಬಂಧವಿರುವುದಿಲ್ಲ ಎಂಬುದು ಅಭಿಮಾನಿ ಸಮೂಹದ ಅಂಬೋಣ. ಅರ್ಥಾತ್ ಭಟ್ಟರು ತಮ್ಮ ಹೊಸ ಸಾಹಸವನ್ನು ಇನ್ನೇನು ಕೆಲವೇ ದಿನಗಳಲ್ಲಿ ಘೋಷಿಸಲಿದ್ದಾರೆ ಮತ್ತು ಈ ಸಾಹಸ ಭಾರತದ ಅದರಲ್ಲೂ ಕರ್ನಾಟಕದ ನೆಲದಲ್ಲಿಯೇ ನಡೆಯಲಿದೆ. ಹೀಗಾಗಿ ಭಟ್ಟರ ಉನ್ನತ ಶಿಕ್ಷಣದ ಕಥೆಯನ್ನು ಕಿವಿ ಮೇಲೆ ಹೂವು ಎಂದು ಕಿಚಾಯಿಸಿದವರು ಮೀಸೆ ಮರೆಯಲ್ಲಿ ನಕ್ಕು ಖುಷಿಪಡಬಹುದು.

ವಿಶ್ವೇಶ್ವರ ಭಟ್ಟರ ಆಪ್ತಮಿತ್ರ ರವಿ ಬೆಳಗೆರೆಯವರು ತಮ್ಮ ಹಾಯ್ ಬೆಂಗಳೂರಿನಲ್ಲಿ ಭಟ್ಟರ ಹೊಸ ಪತ್ರಿಕೆಯ ಹೆಸರು ವಿಶ್ವ ಕರ್ನಾಟಕ ಇರಬಹುದು ಎಂದು ಹೇಳಿದ್ದಾರೆ. ಇತ್ತೀಚಿಗೆ ಭಟ್ಟರಿಗೂ ರವಿಗೂ ಕೆಮಿಸ್ಟ್ರಿ ಹೊಂದುತ್ತಿಲ್ಲ ಎಂಬುದನ್ನು ಸತತ ಮೂರು ಹಾಯ್ ಸಂಚಿಕೆಗಳಲ್ಲಿ ಭಟ್ಟರ ವಿರುದ್ಧವಾಗಿ ಪ್ರಕಟವಾಗುತ್ತಿರುವ ವರದಿಗಳೇ ಹೇಳುತ್ತವೆ. ಹೀಗಾಗಿ ರವಿ ಊಹೆ ಮೇಲೆ ಹೇಳಿರಬಹುದು ಎನ್ನಲಾಗುತ್ತಿದೆ. ಆದರೆ ವಿಶ್ವ ಕರ್ನಾಟಕ ಎಂಬ ಟೈಟಲ್ ರಿಜಿಸ್ಟರ್ ಆಗದೇ ಇರುವುದರಿಂದ ಭಟ್ಟರಿಗೆ ಈ ಟೈಟಲ್ ಸರಿಹೊಂದುವುದಾದರೆ ಅದನ್ನು ಟ್ರೈ ಮಾಡಬಹುದು ಎಂಬ ಪರೋಕ್ಷ ಸೂಚನೆಯನ್ನೂ ರವಿ ಕೊಟ್ಟಿರಬಹುದು.
ಭಟ್ಟರ ರಾಜರಾಜೇಶ್ವರಿ ನಗರದ ನಿವಾಸದಲ್ಲೇ ಇನ್ನೂ ಹುಟ್ಟಬೇಕಿರುವ ಪತ್ರಿಕೆಯ ಸಂಪಾದಕೀಯ ಸಭೆಗಳು ಭರದಿಂದ ನಡೆಯುತ್ತಿವೆ ಎಂಬ ಅಧಿಕೃತ ಮಾಹಿತಿಗಳಂತೂ ಇವೆ. ಪತ್ರಿಕೆಯ ಭಾವಿ ವರದಿಗಾರರು, ಉಪಸಂಪಾದಕರು ಈ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಟ್ಟರ ವಿಜಯ ಕರ್ನಾಟಕ ಎಕ್ಸಿಟ್‌ಗೆ ಮೂಲ ಕಾರಣಕರ್ತರಾದ ವಿಶ್ವಖ್ಯಾತಿಯ ಪತ್ರಕರ್ತರು, ಅಂಕಣಕೋರರು ಈ ಹೊಸ ಸಾಹಸದಲ್ಲಿದ್ದಾರೆ ಎಂಬುದೂ ಸಹ ಅಧಿಕೃತ ಸುದ್ದಿ.

ಲೇಟೆಸ್ಟ್ ಆಗಿ ತಮ್ಮ ವೆಬ್ ಸೈಟ್‌ನಲ್ಲಿ ಹೊಸ ವರ್ಷದ ಶುಭಾಶಯ ಹೇಳೋ ಬದಲಿಗೆ ಕೇಳ್ರಪ್ಪೋ ಕೇಳಿ.... ಎಂದು ಭಟ್ಟರು ಬರೆದುಕೊಂಡಿದ್ದಾರೆ. ಮುಂದಕ್ಕೆ ಏನೇನೂ ಇಲ್ಲ. ಅವರು ಹೇಳೋದನ್ನು ಕೇಳೋದಕ್ಕೆ ಕಾದು ಕುಳಿತಿರುವ ಅಭಿಮಾನಿ ಸಮೂಹ ಇದನ್ನು ಓದಿ ಇನ್ನಷ್ಟು ಚಡಪಡಿಸುತ್ತಿರಬಹುದು.

ಮತ್ತೆ ಮತ್ತೆ ವಿಶ್ವೇಶ್ವರ ಭಟ್ಟರ ಕುರಿತ ಪೋಸ್ಟ್‌ಗಳು ಬರುತ್ತಿರುವುದಕ್ಕೆ ಕ್ಷಮೆ ಇರಲಿ. ಹೇಗೆ ಕರ್ನಾಟಕದ ರಾಜಕಾರಣವನ್ನು ಎಚ್.ಡಿ.ದೇವೇಗೌಡರಿಂದ ಹೊರತುಪಡಿಸಿ ನೋಡಲಾಗುವುದಿಲ್ಲವೋ ಹಾಗೆ ಕರ್ನಾಟಕದ ಮಾಧ್ಯಮ ಲೋಕವನ್ನು ವಿಶ್ವೇಶ್ವರ ಭಟ್ಟರ ಹೊರತಾಗಿ ನೋಡುವುದು ಕಷ್ಟ.

ದೇವೇಗೌಡರು ಆಗಾಗ ಧೂಳಿನಿಂದ ಎದ್ದು ಬರುವುದು ಉಂಟು. ವಿಶ್ವೇಶ್ವರ ಭಟ್ಟರೂ ಸಹ ಧೂಳಿನಿಂದ ಎದ್ದು ಬರುವುದಕ್ಕೆ ಕಾದು ಕುಳಿತಿದ್ದಾರೆ. ಹೀಗೆ ಧೂಳಿನಿಂದ ಎದ್ದು ಬರುವಾಗ ಮೈಗೆ ಹತ್ತಿದ ಧೂಳನ್ನು ಕೊಡವಿಕೊಳ್ಳುವುದನ್ನು ಭಟ್ಟರು ಮರೆಯಬಾರದು ಎಂಬ ಸಣ್ಣ ಸಲಹೆಯೊಂದಿಗೆ ಅವರಿಗೆ ಶುಭ ಕೋರೋಣ.
READ MORE - ವಿಶ್ವೇಶ್ವರ ಭಟ್ಟರು ಸಿಹಿಸುದ್ದಿಯೊಂದಿಗೆ ಬರಲಿದ್ದಾರೆ...

Blog Archive