ಇವತ್ತಿನ ಉದಯವಾಣಿಯಲ್ಲಿ ವಿಜಯ್ ಮಲಗಿಹಾಳ ಬರೆದ ವಿಶೇಷ ವರದಿಯೊಂದು ಗಮನ ಸೆಳೆಯುವಂತಿದೆ. ಹೋಮ, ಹವನ ಮಾಡಿಸುವಂತೆ ಶೆಟ್ಟರ್ಗೆ ಕಾಟ ಎಂಬ ಶೀರ್ಷಿಕೆಯ ವರದಿ ಇದು. ಮುಖ್ಯಮಂತ್ರಿ ಹುದ್ದೆ ಪಡೆಯುವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡ ಜಗದೀಶ್ ಶೆಟ್ಟರ್ ಅವರಿಗೆ ಹೋಮ-ಹವನ ಮಾಡಿಸಿ, ನಿಮಗೆ ಸಿಎಂ ಹುದ್ದೆ ಸಿಗುತ್ತದೆ ಎಂದು ಜ್ಯೋತಿಷಿಗಳು ಕಾಟ ಕೊಡುತ್ತಿದ್ದಾರಂತೆ.

ಇಂಟರೆಸ್ಟಿಂಗ್ ಅಂದರೆ ಜಗದೀಶ್ ಶೆಟ್ಟರ್ ಈ ಜ್ಯೋತಿಷಿಗಳನ್ನು ಕ್ಯಾರೇ ಅನ್ನುತ್ತಿಲ್ಲ ಎನ್ನುವ ಮಾಹಿತಿ ಈ ವರದಿಯಲ್ಲಿದೆ. ಅವರು ವೈಯಕ್ತಿಕ ಮಟ್ಟದ ಪೂಜೆ, ಧಾರ್ಮಿಕ ನಂಬಿಕೆಗಳಲ್ಲೇ ತೃಪ್ತರು. ಧಾರ್ಮಿಕ ಕ್ರಿಯೆಗಳನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಒಲ್ಲರು. ಅವರು ಹೇಳುವುದನ್ನು ಗಮನಿಸಿ.
ರಾಜಕಾರಣದಲ್ಲಿ ಈಗ ಜ್ಯೋತಿಷಿಗಳ ದರ್ಬಾರು ದಿನೇದಿನೇ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆ ಜಗದೀಶ್ ಶೆಟ್ಟರ್ ಅಂಥವರು ಇರುವುದೇ ಸಂತೋಷದ ವಿಷಯ. ದೇವೇಗೌಡ, ಯಡಿಯೂರಪ್ಪ, ಕುಮಾರಸ್ವಾಮಿಗಳ ನಡುವೆ ಜಗದೀಶ್ ಶೆಟ್ಟರ್ ತಮ್ಮ ವೈಯಕ್ತಿಕ ನಿಲುವನ್ನು ಕಾಪಾಡಿಕೊಂಡು ಬಂದಿರುವುದು ಆಶ್ಚರ್ಯ. ಯಾಕೆಂದರೆ ಅಧಿಕಾರ ಸ್ಥಾನದಲ್ಲಿರುವವರ ಮೇಲೆ ಜ್ಯೋತಿಷ್ಯದ ಮೊರೆ ಹೋಗುವ, ಹೋಮ-ಹವನ, ಮಾಟ-ಮಂತ್ರ ಮಾಡಿಸುವ ಒತ್ತಡ ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ. ದುರ್ಬಲ ಮನಸ್ಸಿನವರು ಸುಲಭವಾಗಿ ಬಲಿಯಾಗುತ್ತಾರೆ. ಶೆಟ್ಟರ್ ಅಂಥವರಲ್ಲ ಅನ್ನುವುದು ಸಂತೋಷದ ವಿಷಯ. ಸೋನಿಯಾ ಗಾಂಧಿ ಗುಣಮುಖರಾಗಲೆಂದು ಜನಾರ್ದನ ಪೂಜಾರಿಯಂಥ ಹಿರಿಯ ರಾಜಕಾರಣಿ ಉರುಳು ಸೇವೆ ಮಾಡುವ ಸಾರ್ವಜನಿಕ ಮನರಂಜನೆಯಲ್ಲಿ ತೊಡಗಿರುವಾಗ ಶೆಟ್ಟರ್ ರಂಥವರು ಭರವಸೆ ಮೂಡಿಸುತ್ತಾರೆ.
***
ನಿಮಗೆ ಗೊತ್ತು, ಈ ಬ್ಲಾಗ್ ನಲ್ಲಿ ನಾವು ಪದೇಪದೇ ಕಪಟ ಜ್ಯೋತಿಷಿಗಳ ವಿರುದ್ಧ ಗಂಟಲು ಹರಿದುಕೊಳ್ಳುವಷ್ಟು ಮಾತನಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಮಾಧ್ಯಮಗಳಲ್ಲಿ ಜ್ಯೋತಿಷಿಗಳ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲ ಚಾನಲ್ಗಳೂ ದಿನವನ್ನು ಆರಂಭಿಸುವುದೇ ಜ್ಯೋತಿಷಿಗಳ ಮೂಲಕ. ನ್ಯೂಸ್ ಚಾನಲ್ಗಳಂತೂ ಏನೇ ವಿವಾದ ಎದ್ದರೂ ಮೂರ್ಲಾಲ್ಕು ಜ್ಯೋತಿಷಿಗಳನ್ನು ಹಿಡಿದು ತಂದು ಚರ್ಚೆ ಆರಂಭಿಸುತ್ತವೆ. ನಮಗೂ ಟೀಕಿಸಿ ಸಾಕಾಗಿ ಹೋಗಿದೆ. ನಾಯಿ ಬಾಲ ನೆಟ್ಟಗಾಗುವುದಿಲ್ಲ.
ಆದರೆ ಒಂದು ಆಶಾದಾಯಕ ಬೆಳವಣಿಗೆಯನ್ನು ನಿಮಗೆ ಹೇಳಲೇಬೇಕು. ಜನಶ್ರೀ ಚಾನಲ್ ಮಾತ್ರ ಜ್ಯೋತಿಷಿಗಳನ್ನು ಮೈಮೇಲೆ ಬಿಟ್ಟುಕೊಂಡಿಲ್ಲ. ಜ್ಯೋತಿಷಿಗಳನ್ನು ಬಳಸಿಕೊಳ್ಳದೇ ಆ ಚಾನಲ್ ಮುಂದುವರೆಯುತ್ತಿದೆ. ಇತರ ಚಾನಲ್ಗಳಲ್ಲಿ ಜ್ಯೋತಿಷಿಗಳು ಪದ್ಮಾಸನ ಹಾಕಿ ಕುಳಿತು ಪ್ರವಚನ ನಡೆಸುವ ಸಮಯಕ್ಕೆ ಸರಿಯಾಗಿ ಜನಶ್ರೀ ಚಾನಲ್ ನಿರುದ್ಯೋಗಿ ಯುವಕ-ಯುವತಿಯರಿಗೆ ಎಲ್ಲೆಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ ಎಂಬುದನ್ನು ಹೇಳುವ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಬೊಗಳೆ ಜ್ಯೋತಿಷ್ಯವನ್ನು ಪ್ರಸಾರ ಮಾಡಿ ಜನರ ತಲೆಕೆಡಿಸುವ ಬದಲು ನಿರುದ್ಯೋಗಿ ಯುವಸಮುದಾಯದ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ತನ್ನ ಆದ್ಯತೆಗಳೇನು ಎಂಬುದನ್ನು ಅದು ಸ್ಪಷ್ಟಪಡಿಸಿಕೊಂಡಿದೆ.
ಜನಶ್ರೀಯನ್ನು ಮೆಚ್ಚಿಕೊಳ್ಳುವುದಕ್ಕೆ ಇನ್ನಷ್ಟು ಕಾರಣಗಳೂ ಇವೆ. ಕಳೆದ ಹದಿನೈದು ದಿನಗಳ ರಾಜಕೀಯ ವಿಪ್ಲವಗಳ ಸಂದರ್ಭದಲ್ಲಿ ಜನಶ್ರೀ ಸುದ್ದಿ ಮತ್ತು ವಿಶ್ಲೇಷಣೆಯನ್ನು ನಿರ್ವಹಿಸಿದ ರೀತಿ ಸೊಗಸಾಗಿತ್ತು. ಚಾನಲ್ನ ಮುಖ್ಯಸ್ಥ ಅನಂತ ಚಿನಿವಾರ್ ನಡೆಸುವ ಚರ್ಚೆಗಳು ಗಮನ ಸೆಳೆಯುವಂತಿದ್ದವು. ಚಾನಲ್ನ ಒಡೆಯರು ರೆಡ್ಡಿ ಸೋದರರಾಗಿದ್ದರೂ, ಅವರ ರಾಜಕೀಯ ನಿಲುವುಗಳನ್ನು ಬದಿಗಿಟ್ಟು ಕಾರ್ಯಕ್ರಮ ನಡೆಸುವಲ್ಲಿ ಅವರು ಯಶಸ್ವಿಯಾದರು.
ನಿಮಗೆ ನೆನಪಿರಬಹುದು. ಜನಶ್ರೀ ಶುರುವಾಗುವ ಹೊತ್ತಿನಲ್ಲಿ ಇದೂ ಸಹ ಕಸ್ತೂರಿ ವಾಹಿನಿಯಂತೆ ತನ್ನ ಮಾಲಿಕರ ಒಲವು-ನಿಲುವುಗಳನ್ನು ಬಿಂಬಿಸುವ ಚಾನಲ್ ಆಗಬಹುದು ಎಂದು ಅನುಮಾನಪಟ್ಟಿದ್ದೆವು. ಆದರೆ ಅದನ್ನು ಸುಳ್ಳು ಮಾಡುವಲ್ಲಿ ಜನಶ್ರೀ ತಂಡ ಯಶಸ್ವಿಯಾಗಿದೆ.
ಅಪ್ಪಂದಿರ ದಿನದಂದು ಅನಂತ್ ಚಿನಿವಾರ್ ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪತ್ರಕರ್ತ ಬಿ.ವಿ.ವೈಕುಂಠರಾಜು, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಮಕ್ಕಳನ್ನು ( ಚುಕ್ಕಿ, ಸನತ್ ಕುಮಾರ್, ಮಹಿಮಾ ಪಟೇಲ್) ಕೂರಿಸಿಕೊಂಡು ಒಂದು ವಿಶೇಷ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ ಮನಮುಟ್ಟುವಂತಿತ್ತು. ಸಂಜೆ ಶ್ರೀ ಲಕ್ಷ್ಮಿ ನಡೆಸಿಕೊಡುವ ವಿಶೇಷ ಕಾರ್ಯಕ್ರಮವೂ ಆಸಕ್ತಿದಾಯಕವಾಗಿರುತ್ತದೆ. ಇಂಥ ಹಲವು ವಿಶೇಷಗಳು ಜನಶ್ರೀಯಲ್ಲಿದೆ. ಹೀಗಾಗಿಯೇ ಅದು ದಿನೇದಿನೇ ತನ್ನ ಟಿಆರ್ಪಿಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಜನಶ್ರೀ ತಂಡಕ್ಕೆ ಅಭಿನಂದನೆಗಳು ಹಾಗು ವಿಶೇಷವಾಗಿ ಜ್ಯೋತಿಷಗಳನ್ನು ಸೇರಿಸಿಕೊಳ್ಳದ ಅವರ ನಿಲುವಿಗೆ ಕೃತಜ್ಞತೆಗಳು.
ಕೊನೆಕುಟುಕು: ಜನಶ್ರೀ ಬಳ್ಳಾರಿ ರೆಡ್ಡಿಗಳ ತುತ್ತೂರಿಯಾಗಿಲ್ಲ ಎಂಬುದೇನೋ ನಿಜ. ಒಂದು ವೇಳೆ ಹಾಗೆ ಆಗಿದ್ದರೆ ಜನಶ್ರೀ ತಂಡ ಹುಚ್ಚಾಸ್ಪತ್ರೆಗೆ ಸೇರಬೇಕಿತ್ತು. ಯಾಕೆಂದರೆ, ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವವರೆಗೂ ಅವರ ಜತೆಯಲ್ಲೇ ಇದ್ದ ಜನಾರ್ದನರೆಡ್ಡಿ ಸಂಜೆ ಹೊತ್ತಿಗೆ ಜಗದೀಶ್ ಶೆಟ್ಟರ್ ಕ್ಯಾಂಪ್ ಸೇರಿಕೊಂಡಿದ್ದರು!

ಇಂಟರೆಸ್ಟಿಂಗ್ ಅಂದರೆ ಜಗದೀಶ್ ಶೆಟ್ಟರ್ ಈ ಜ್ಯೋತಿಷಿಗಳನ್ನು ಕ್ಯಾರೇ ಅನ್ನುತ್ತಿಲ್ಲ ಎನ್ನುವ ಮಾಹಿತಿ ಈ ವರದಿಯಲ್ಲಿದೆ. ಅವರು ವೈಯಕ್ತಿಕ ಮಟ್ಟದ ಪೂಜೆ, ಧಾರ್ಮಿಕ ನಂಬಿಕೆಗಳಲ್ಲೇ ತೃಪ್ತರು. ಧಾರ್ಮಿಕ ಕ್ರಿಯೆಗಳನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಒಲ್ಲರು. ಅವರು ಹೇಳುವುದನ್ನು ಗಮನಿಸಿ.
ನನಗೆ ಮೊದಲಿನಿಂದಲೂ ಈ ಜ್ಯೋತಿಷ್ಯ, ಹೋಮ, ಹವನ ಮತ್ತಿತರ ಪೂಜಾ ವಿಧಿ ಕೈಗೊಳ್ಳುವುದರಲ್ಲಿ ನಂಬಿಕೆಯಿಲ್ಲ. ಇದುವರೆಗೆ ನಾನು ಯಾವ ಹೋಮ, ಹವನ ಮಾಡದೆ ಈ ಸ್ಥಾನದವರೆಗೆ ಬಂದಿದ್ದೇನೆ. ಮುಂದೆ ಬರಬೇಕಾದ್ದು ಬಂದೇ ಬರುತ್ತದೆ. ಅದಕ್ಕಾಗಿ ಈ ರೀತಿಯ ವಿಶೇಷ ಪ್ರಯತ್ನ ಮಾಡುವುದು ನನ್ನ ಮನಸ್ಸಿಗೆ ಒಪ್ಪುವುದಿಲ್ಲ.
ರಾಜಕಾರಣದಲ್ಲಿ ಈಗ ಜ್ಯೋತಿಷಿಗಳ ದರ್ಬಾರು ದಿನೇದಿನೇ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆ ಜಗದೀಶ್ ಶೆಟ್ಟರ್ ಅಂಥವರು ಇರುವುದೇ ಸಂತೋಷದ ವಿಷಯ. ದೇವೇಗೌಡ, ಯಡಿಯೂರಪ್ಪ, ಕುಮಾರಸ್ವಾಮಿಗಳ ನಡುವೆ ಜಗದೀಶ್ ಶೆಟ್ಟರ್ ತಮ್ಮ ವೈಯಕ್ತಿಕ ನಿಲುವನ್ನು ಕಾಪಾಡಿಕೊಂಡು ಬಂದಿರುವುದು ಆಶ್ಚರ್ಯ. ಯಾಕೆಂದರೆ ಅಧಿಕಾರ ಸ್ಥಾನದಲ್ಲಿರುವವರ ಮೇಲೆ ಜ್ಯೋತಿಷ್ಯದ ಮೊರೆ ಹೋಗುವ, ಹೋಮ-ಹವನ, ಮಾಟ-ಮಂತ್ರ ಮಾಡಿಸುವ ಒತ್ತಡ ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ. ದುರ್ಬಲ ಮನಸ್ಸಿನವರು ಸುಲಭವಾಗಿ ಬಲಿಯಾಗುತ್ತಾರೆ. ಶೆಟ್ಟರ್ ಅಂಥವರಲ್ಲ ಅನ್ನುವುದು ಸಂತೋಷದ ವಿಷಯ. ಸೋನಿಯಾ ಗಾಂಧಿ ಗುಣಮುಖರಾಗಲೆಂದು ಜನಾರ್ದನ ಪೂಜಾರಿಯಂಥ ಹಿರಿಯ ರಾಜಕಾರಣಿ ಉರುಳು ಸೇವೆ ಮಾಡುವ ಸಾರ್ವಜನಿಕ ಮನರಂಜನೆಯಲ್ಲಿ ತೊಡಗಿರುವಾಗ ಶೆಟ್ಟರ್ ರಂಥವರು ಭರವಸೆ ಮೂಡಿಸುತ್ತಾರೆ.
***
ನಿಮಗೆ ಗೊತ್ತು, ಈ ಬ್ಲಾಗ್ ನಲ್ಲಿ ನಾವು ಪದೇಪದೇ ಕಪಟ ಜ್ಯೋತಿಷಿಗಳ ವಿರುದ್ಧ ಗಂಟಲು ಹರಿದುಕೊಳ್ಳುವಷ್ಟು ಮಾತನಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಮಾಧ್ಯಮಗಳಲ್ಲಿ ಜ್ಯೋತಿಷಿಗಳ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲ ಚಾನಲ್ಗಳೂ ದಿನವನ್ನು ಆರಂಭಿಸುವುದೇ ಜ್ಯೋತಿಷಿಗಳ ಮೂಲಕ. ನ್ಯೂಸ್ ಚಾನಲ್ಗಳಂತೂ ಏನೇ ವಿವಾದ ಎದ್ದರೂ ಮೂರ್ಲಾಲ್ಕು ಜ್ಯೋತಿಷಿಗಳನ್ನು ಹಿಡಿದು ತಂದು ಚರ್ಚೆ ಆರಂಭಿಸುತ್ತವೆ. ನಮಗೂ ಟೀಕಿಸಿ ಸಾಕಾಗಿ ಹೋಗಿದೆ. ನಾಯಿ ಬಾಲ ನೆಟ್ಟಗಾಗುವುದಿಲ್ಲ.ಆದರೆ ಒಂದು ಆಶಾದಾಯಕ ಬೆಳವಣಿಗೆಯನ್ನು ನಿಮಗೆ ಹೇಳಲೇಬೇಕು. ಜನಶ್ರೀ ಚಾನಲ್ ಮಾತ್ರ ಜ್ಯೋತಿಷಿಗಳನ್ನು ಮೈಮೇಲೆ ಬಿಟ್ಟುಕೊಂಡಿಲ್ಲ. ಜ್ಯೋತಿಷಿಗಳನ್ನು ಬಳಸಿಕೊಳ್ಳದೇ ಆ ಚಾನಲ್ ಮುಂದುವರೆಯುತ್ತಿದೆ. ಇತರ ಚಾನಲ್ಗಳಲ್ಲಿ ಜ್ಯೋತಿಷಿಗಳು ಪದ್ಮಾಸನ ಹಾಕಿ ಕುಳಿತು ಪ್ರವಚನ ನಡೆಸುವ ಸಮಯಕ್ಕೆ ಸರಿಯಾಗಿ ಜನಶ್ರೀ ಚಾನಲ್ ನಿರುದ್ಯೋಗಿ ಯುವಕ-ಯುವತಿಯರಿಗೆ ಎಲ್ಲೆಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ ಎಂಬುದನ್ನು ಹೇಳುವ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಬೊಗಳೆ ಜ್ಯೋತಿಷ್ಯವನ್ನು ಪ್ರಸಾರ ಮಾಡಿ ಜನರ ತಲೆಕೆಡಿಸುವ ಬದಲು ನಿರುದ್ಯೋಗಿ ಯುವಸಮುದಾಯದ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ತನ್ನ ಆದ್ಯತೆಗಳೇನು ಎಂಬುದನ್ನು ಅದು ಸ್ಪಷ್ಟಪಡಿಸಿಕೊಂಡಿದೆ.
ಜನಶ್ರೀಯನ್ನು ಮೆಚ್ಚಿಕೊಳ್ಳುವುದಕ್ಕೆ ಇನ್ನಷ್ಟು ಕಾರಣಗಳೂ ಇವೆ. ಕಳೆದ ಹದಿನೈದು ದಿನಗಳ ರಾಜಕೀಯ ವಿಪ್ಲವಗಳ ಸಂದರ್ಭದಲ್ಲಿ ಜನಶ್ರೀ ಸುದ್ದಿ ಮತ್ತು ವಿಶ್ಲೇಷಣೆಯನ್ನು ನಿರ್ವಹಿಸಿದ ರೀತಿ ಸೊಗಸಾಗಿತ್ತು. ಚಾನಲ್ನ ಮುಖ್ಯಸ್ಥ ಅನಂತ ಚಿನಿವಾರ್ ನಡೆಸುವ ಚರ್ಚೆಗಳು ಗಮನ ಸೆಳೆಯುವಂತಿದ್ದವು. ಚಾನಲ್ನ ಒಡೆಯರು ರೆಡ್ಡಿ ಸೋದರರಾಗಿದ್ದರೂ, ಅವರ ರಾಜಕೀಯ ನಿಲುವುಗಳನ್ನು ಬದಿಗಿಟ್ಟು ಕಾರ್ಯಕ್ರಮ ನಡೆಸುವಲ್ಲಿ ಅವರು ಯಶಸ್ವಿಯಾದರು.
ನಿಮಗೆ ನೆನಪಿರಬಹುದು. ಜನಶ್ರೀ ಶುರುವಾಗುವ ಹೊತ್ತಿನಲ್ಲಿ ಇದೂ ಸಹ ಕಸ್ತೂರಿ ವಾಹಿನಿಯಂತೆ ತನ್ನ ಮಾಲಿಕರ ಒಲವು-ನಿಲುವುಗಳನ್ನು ಬಿಂಬಿಸುವ ಚಾನಲ್ ಆಗಬಹುದು ಎಂದು ಅನುಮಾನಪಟ್ಟಿದ್ದೆವು. ಆದರೆ ಅದನ್ನು ಸುಳ್ಳು ಮಾಡುವಲ್ಲಿ ಜನಶ್ರೀ ತಂಡ ಯಶಸ್ವಿಯಾಗಿದೆ.
ಅಪ್ಪಂದಿರ ದಿನದಂದು ಅನಂತ್ ಚಿನಿವಾರ್ ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪತ್ರಕರ್ತ ಬಿ.ವಿ.ವೈಕುಂಠರಾಜು, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಮಕ್ಕಳನ್ನು ( ಚುಕ್ಕಿ, ಸನತ್ ಕುಮಾರ್, ಮಹಿಮಾ ಪಟೇಲ್) ಕೂರಿಸಿಕೊಂಡು ಒಂದು ವಿಶೇಷ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ ಮನಮುಟ್ಟುವಂತಿತ್ತು. ಸಂಜೆ ಶ್ರೀ ಲಕ್ಷ್ಮಿ ನಡೆಸಿಕೊಡುವ ವಿಶೇಷ ಕಾರ್ಯಕ್ರಮವೂ ಆಸಕ್ತಿದಾಯಕವಾಗಿರುತ್ತದೆ. ಇಂಥ ಹಲವು ವಿಶೇಷಗಳು ಜನಶ್ರೀಯಲ್ಲಿದೆ. ಹೀಗಾಗಿಯೇ ಅದು ದಿನೇದಿನೇ ತನ್ನ ಟಿಆರ್ಪಿಯನ್ನು ಹೆಚ್ಚಿಸಿಕೊಳ್ಳುತ್ತಿದೆ.ಜನಶ್ರೀ ತಂಡಕ್ಕೆ ಅಭಿನಂದನೆಗಳು ಹಾಗು ವಿಶೇಷವಾಗಿ ಜ್ಯೋತಿಷಗಳನ್ನು ಸೇರಿಸಿಕೊಳ್ಳದ ಅವರ ನಿಲುವಿಗೆ ಕೃತಜ್ಞತೆಗಳು.

发表评论